ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬದಿಂದ ತಂದೆ, ಮಕ್ಕಳಲ್ಲಿ ಅನ್ಯೋನ್ಯತೆ, ಗೌರವ ಭಾವನೆಗಳು ಕಂಡುಬರುತ್ತಿದ್ದವು. ವಿಭಕ್ತ ಕುಟುಂಬದಲ್ಲಿ ತಂದೆ, ಮಕ್ಕಳು ಆದರ್ಶ ಜೀವನ ಕಂಡುಕೊಳ್ಳಲು ಸಾಧ್ಯವಿಲ್ಲ. ಜೀವನದ ವ್ಯವಸ್ಥೆಯಲ್ಲಿ ತಾಯಿ, ತಂದೆಗೆ ಮಹತ್ವವಿದ್ದು, ತಾಯಿ ಜನ್ಮ ನೀಡಿದರೆ, ತಂದೆ ಮಕ್ಕಳ ಇಡೀ ಜೀವನದ ಜವಾಬ್ದಾರಿ ಹೊರುತ್ತಾರೆ. ಅಂತಹ ಶ್ರೇಷ್ಠ ವ್ಯಕ್ತಿ ತಂದೆಯಾಗಿದ್ದಾನೆ ಎಂದರು.