ಪಂಚೇಂದ್ರಿಯಗಳಲ್ಲಿ ಕಣ್ಣು ಮುಖ್ಯಅಂಗ

ಎನ್.ಆರ್.ಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರವನ್ನು  ಎಚ್.ಎಸ್.ಮೋಹನ್ ಉದ್ಘಾಟಿಸಿದರು.
ಎನ್.ಆರ್.ಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಎಚ್.ಎಸ್.ಮೋಹನ್ ಉದ್ಘಾಟಿಸಿದರು.
Published on
ಎನ್.ಆರ್.ಪುರ: ಪಂಚೇಂದ್ರಿಯಗಳಲ್ಲಿ ಕಣ್ಣು ಅತಿ ಮುಖ್ಯ ಅಂಗ ಎಂದು ರೋಟರಿ ಜಿಲ್ಲೆ 3182ರ ವಲಯ 6ರ ನಿಯೋಜಿತ ಉಪ ಗರ್ವನರ್ ಎಚ್.ಎಸ್.ಮೋಹನ್ ತಿಳಿಸಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿ, 6ನೇ ತರಗತಿಯಿಂದ ಪಿಯುಸಿವರೆಗೆ ಮಕ್ಕಳ ಕಣ್ಣಿನ ತಪಾಸಣೆ ಮುಖ್ಯ. ಈ ವೇಳೆ ಮಕ್ಕಳ ದೃಷ್ಠಿಯಲ್ಲಿ ವ್ಯತ್ಯಾಸಗಳು ಪ್ರಾರಂಭವಾಗುತ್ತದೆ. ಹೊಸದಾಗಿ ರೋಟರಿ ಸಂಸ್ಥೆಯಿಂದ ಮಹಿಳೆಯರ ಎದೆ ಕ್ಯಾನ್ಸರ್ ಬಾರದ ರೀತಿಯಲ್ಲಿ ಉಚಿತ ಔಷಧ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಬಿಇಒ ಶಬಾನಾ ಅಂಜುಮ್ ಮಾತನಾಡಿ, ಮಕ್ಕಳು ಮೊಬೈಲ್, ಟಿವಿ ನೋಡುವುದನ್ನು ಕಡಿಮೆ ಮಾಡಿದರೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಕೆಪಿಎಸ್‌ನ ಹಿರಿಯ ಪ್ರಾಥಮಿಕ ಶಾಲಾ ವಿಭಾಗ, ಪ್ರೌಢ ಶಾಲಾ ವಿಭಾಗ ಹಾಗೂ ಮೌಲಾನ ಆಜಾದ್ ಪ್ರೌಢ ಶಾಲೆಯ 450 ಮಕ್ಕಳ ನೇತ್ರ ತಪಾಸಣೆ ನಡೆಸಲಾಯಿತು.ರೋಟರಿ ಉಪ ಗರ್ವನರ್ ಎಚ್.ಎಸ್.ಮೋಹನ್ ಹಾಗೂ ಬಿಇಓ ಶಬಾನಾ ಅಂಜುಮ್ ಅವರನ್ನು ಗೌರವಿಸಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್, ನಿಯೋಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್, ಕಟಗಳಲೆ ಲೋಕೇಶ್, ನೇತ್ರ ತಜ್ಞ ಡಾ.ಆಶ್ರತ್, ಕೆಪಿಎಸ್ ಎಸ್‌ಡಿಎಂಸಿ ಉಪಾಧ್ಯಕ್ಷ ಉದಯಗಿಲ್ಲಿ, ಸದಸ್ಯ ಅಭಿನವ ಗಿರಿರಾಜ್, ಬಿ.ನಂಜುಂಡಪ್ಪ, ಚಂದ್ರಯ್ಯ ಇದ್ದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net