ಛತ್ರಮೈದಾನ ನಿವಾಸಿ ಕೆ.ಪಿ.ಖಾಲಿದ್ ಮಾತನಾಡಿ, ಉತ್ತಮ ಸ್ಥಿತಿಯಲ್ಲಿದ್ದ ರಸ್ತೆ ಅಗೆದು 1ತಿಂಗಳು ಕಳೆದರೂ ಕಾಂಕ್ರೆಟ್ ರಸ್ತೆ ಕಾಮಗಾರಿ ಆರಂಭಿಸಿಲ್ಲ. ರಸ್ತೆ ಅಗೆದು ಬಿಟ್ಟಿರುವುದರಿಂದ ಈಗ ಬಡಾವಣೆಯಲ್ಲಿ ಯಾವ ವಾಹನವೂ ಸಂಚರಿಸುವಂತಿಲ್ಲ. ಬೈಕ್‌ನಲ್ಲಿ ಸಂಚರಿಸಿ ಹಲವರು ಬಿದ್ದು ಗಾಯಗೊಂಡಿದ್ದಾರೆ. ಅನಾರೋಗ್ಯಪೀಡಿತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ತಿರುಗಾಡಲು ಹರಸಾಹಸ ಪಡಬೇಕಾಗಿದೆ. ರಸ್ತೆ ತೆರವುಗೊಳಿಸುವಾಗ ಬದಿಯಲ್ಲಿದ್ದ ನೀರಿನ ಪೈಪ್‌ಗಳನ್ನು ಒಡೆದು ಹಾಕಿದ್ದರಿಂದ ನೀರು ಸೋರಿಕೆಯಾಗುತ್ತಿದೆ. ಬಡಾವಣೆ ನಿವಾಸಿಗಳಿಗೆ ಕಳೆದ 1ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ ಎಂದು ದೂರಿದರು.