ಹುಲಿ ಗಣತಿಗೆ ಹಾಕಿದ ಕ್ಯಾಮರಗಳೇ ಕಳವು

ಭದ್ರಾ ಅಭಯಾರಣ್ಯ
ಭದ್ರಾ ಅಭಯಾರಣ್ಯ
Published on

ಪ್ರಮುಖ ಮುಖ್ಯಾಂಶಗಳು

  • ಹುಲಿ ಗಣತಿ ಕಾರ್ಯ ಆರಂಭ
  • ಎಲ್ಲಿ ಹುಲಿಗಳ ಸಂಚಾರ ಇದೆಯೋ ಅಲ್ಲೆಲ್ಲ ಕ್ಯಾಮೆರಾಗಳ ಅಳವಡಿಕೆ
  • ಕ್ಯಾಮೆರಾಗಳೆ ಕಳ್ಳತನವಾಗುತ್ತಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ತಲೆನೋವಿಗೆ ಕಾರಣ
ಚಿಕ್ಕಮಗಳೂರು: 
ಜಿಲ್ಲೆಯಲ್ಲಿ ಹುಲಿ ಗಣತಿ ಕಾರ್ಯ ಆರಂಭಗೊಂಡಿದ್ದು, ಭದ್ರಾ ಅಭಯಾರಣ್ಯ ಸೇರಿದಂತೆ ಎಲ್ಲಿ ಹುಲಿಗಳ ಸಂಚಾರ ಇದೆಯೋ ಅಲ್ಲೆಲ್ಲ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿ ಜಿಲ್ಲೆಯಲ್ಲಿ ಎಷ್ಟು ಹುಲಿಗಳಿವೆ ಎಂಬ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ. ಆದರೆ ಹುಲಿ 
ಗಣತಿ
ಗಾಗಿ ಅಳವಡಿಕೆ ಮಾಡಿದ್ದ ಕ್ಯಾಮೆರಾಗಳೆ ಕಳ್ಳತನವಾಗುತ್ತಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.
ಭದ್ರಾ ಅಭಯಾರಣ್ಯ ಸೇರಿದಂತೆ ಜಿಲ್ಲೆಯಲ್ಲಿನ ಡೀಮ್ಡ್ ಫಾರೆಸ್ಟ್ ಗಳು ಹಾಗೂ ದಟ್ಟ ಅರಣ್ಯ ಪ್ರದೇಶಗಳಲ್ಲಿ ಕಳೆದ ಎರಡು ತಿಂಗಳಿಂದ‌ ಅಲ್ಲಲ್ಲಿ ಕ್ಯಾಮರಾ ಲ
ಅಳವಡಿಕೆ‌ ಮಾಡಲಾಗಿದೆ. ಹೀಗೆ ಕ್ಯಾಮರಾ ಅಳವಡಿಕೆ ಮಾಡಿದ್ದರಿಂದಾಗಿ ಕಾಡುಗಳ್ಳರು ಹಾಗೂ ವನ್ಯಜೀವಿ ಭೇಟೆಗಾರರಿಗೆ ತಾವು ಸಿಕ್ಕಿಬೀಳುವ ಭಯ  ಎದುರಾಗಿದೆ. ಇದೇ‌ ಕಾರಣದಿಂದಲೇ ಕ್ಯಾಮರಾ ಕಳ್ಳತನ ನಡೆದಿದೆಯೇ ಎಂಬ ಅನುಮಾನಗಳು ಮೂಡಿವೆ.
ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ಗ್ರಾಮದ ಡೀಮ್ಡ್ ಫಾರೆಸ್ಟ್ ನಲ್ಲಿ ಹುಲಿ ಕನಸಿಗಾಗಿ ಎರಡು ಕ್ಯಾಮೆರಾ ಅಳವಡಿಕೆ ಮಾಡಲಾಗಿತ್ತು. ನಿರಂತರವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕ್ಯಾಮರಾಗಳ ಪರಿಶೀಲನೆ ನಡೆಸುತ್ತಲೇ ಇದ್ದರು. ಆದರೆ ಮೇ 5ರಂದು ಸಿಬ್ಬಂದಿ ಕ್ಯಾಮರಾ ಅಳವಡಿಸಿದ್ದ ಜಾಗಕ್ಕೆ‌ ಹೋಗಿ ನೋಡಿದಾಗ ಎರಡು ಕ್ಯಾಮರಾಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಒಂದು ಕ್ಯಾಮರಾದ ಬೆಲೆ 20ಸಾವಿರ‌ ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿದ್ದಾರೆ.
ಅಕ್ರಮ‌ ದಂಧೆಕೋರರ ಮೇಲೆ ಸಂಶಯ: 
ಅರಣ್ಯದ ಅಂಚಿನಲ್ಲಿ ಮರಗಳತನ ಸೇರಿದಂತೆ ಅಕ್ರಮ ಬೇಟೆ ನಡೆಯುತ್ತಲೇ ಇರುತ್ತದೆ. ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟೇ ಕ್ರಮವಹಿಸಿದ್ದರೂ ಅಕ್ರಮ ದಂಧೆಕೋರರು ತಮ್ಮ ಅಕ್ರಮ ಚಟುವಟಿಕೆ ನಿಲ್ಲಿಸುತ್ತಿಲ್ಲ. ಸಿಕ್ಕಿಬಿದ್ದು ಜೈಲು ಸೇರಿದರೂ ಜೈಲಿನಿಂದ‌ ಹೊರಬಂದ‌ ಕೆಲವೇ ದಿನಗಳಲ್ಲಿ ಮತ್ತೆ ತಮ್ಮ ಅಕ್ರಮ ಚಟುವಟಿಕೆ ಆರಂಭಿಸುತ್ತಿದ್ದಾರೆ. ಹೀಗೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ನಡೆಸುವವರೇ ತಾವೆಲ್ಲಿ ಕ್ಯಾಮರಾಗಳಲ್ಲಿ ಸೆರೆಯಾಗುತ್ತೇವೆಯೋ ಎಂಬ ಭಯದಿಂದ ಕ್ಯಾಮರಾಗಳನ್ನು ಕಳ್ಳತನ ಮಾಡಿರುವ ಸಾಧ್ಯತೆಯೂ ಇದೆ ಎಂದು ಅರಣ್ಯ ಇಲಾಖೆ‌ ಹಿರಿಯ ಅಧಿಕಾರಿಗಳು  ಅನುಮಾನ ವ್ಯಕ್ತಪಡಿಸಿದ್ದಾರೆ.
ಅರಣ್ಯದಲ್ಲಿ ಅಕ್ರಮ ತಂದೆ ನಡೆಸುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸದೇ ಇದ್ದಲ್ಲಿ ಇನ್ನಷ್ಟು ಕ್ಯಾಮರಾಗಳು ಕಳ್ಳತನವಾಗುವ ಆತಂಕವೂ ಇದೆ.
ವನ್ಯಜೀವಿಗಳ ಸುರಕ್ಷತೆ ಬಗ್ಗೆ ಪ್ರಶ್ನೆ
ಕಾಡಿನಲ್ಲಿ ಅಳವಡಿಸಿದ್ದ ಕಾರಣಗಳು ಕಳುವಾದ ಬೆನ್ನಲ್ಲೇ ಅರಣ್ಯದಲ್ಲಿರುವ ವನ್ಯಜೀವಿಗಳ ಸುರಕ್ಷತೆ ಬಗ್ಗೆ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.  ಸಂರಕ್ಷಿತ ಅರಣ್ಯ ಪ್ರದೇಶದಲ್ಲಿಯೇ ಅಕ್ರಮ ದಂಧೆಕೋರರು ರಾಜಾರೋಷವಾಗಿ ಓಡಾಟ ನಡೆಸುತ್ತಿರುವುದು ಕ್ಯಾಮರಾ ಕಳ್ಳತನ ಪ್ರಕರಣದಿಂದಾಗಿ ಬಯಲಾಗಿದೆ. ಹೀಗೆ ಅರಣ್ಯ ಪ್ರವೇಶ ಮಾಡುವವರು ವನ್ಯಜೀವಿಗಳಿಗೂ ತೊಂದರೆ ಮಾಡುವ ಸಾಧ್ಯತೆ ಹೆಚ್ಚಿದೆ.
ಕಾಡಲ್ಲಿ ಅಳವಡಿಸಿರುವ ಕ್ಯಾಮರಗಳನ್ನು ಕಳವು ಮಾಡಿರುವ ದಂಧಕೂರರು ವನ್ಯಜೀವಿಗಳನ್ನು ಅಕ್ರಮವಾಗಿ ಬೇಟೆ ಮಾಡುವ ಸಾಧ್ಯತೆಯೂ ಹೆಚ್ವಿದೆ. ತಮ್ಮ ಅಕ್ರಮ ಬೇಟೆಗೆ ಕ್ಯಾಮೆರಾ ಗಳು ಅಡ್ಡಿಯಾಗಬಾರದು ಎನ್ನುವ ಕಾರಣಕ್ಕಾಗಿ ಕ್ಯಾಮರಗಳನ್ನು ಕಳವು ಮಾಡಿರುವ ಸಾಧ್ಯತೆ ಹೆಚ್ಚಿದೆ. ಅರಣ್ಯ ಪ್ರದೇಶದ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಸ್ಥಳೀಯರ ನೆರವಿನೊಂದಿಗೆ ಕಳ್ಳತನ ನಡೆದಿರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ.  ಜೊತೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಹ ಇದೇ ನಿಟ್ಟಿನಲ್ಲಿಯೇ ತನಿಖೆ ಆರಂಭಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net