ಯುವಪೀಳಿಗೆಗೆ ಹಲಸಿನ ಹಣ್ಣಿನ ಮಹತ್ವ ತಿಳಿಸಿ

22 sri 1
22 sri 1
Published on
ಶೃಂಗೇರಿ: ಹಲಸಿನ ಹಣ್ಣು ಮಲೆನಾಡಿನಲ್ಲಿ ವಿಫುಲವಾಗಿ ಬೆಳೆಯುವ ಹಣ್ಣು. ಹಲಸಿನ ಹಣ್ಣು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಾರಂಪರಿಕವಾಗಿ ಬೆಳೆದು ಬಂದ ಹಲಸಿನ ಹಣ್ಣನ್ನು ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸುತ್ತಿದ್ದು. ಪ್ರಸ್ತುತ ಹಲಸಿನ ಹಣ್ಣಿನ ಮಹತ್ವವನ್ನು ಯುವಪೀಳಿಗೆ ಅರಿಯುವ ಅಗತ್ಯವಿದೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್.ಎಸ್.ಶೆಟ್ಟಿ ತಿಳಿಸಿದರು.
ಜೆಸಿಬಿಎಂ ಕಾಲೇಜಿನಲ್ಲಿ ಆಯೋಜಿಸಿದ್ದ ಹಲಸು, ಸ್ವದೇಶಿ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸ್ವದೇಶಿ ಮೇಳ ಆತ್ಮನಿರ್ಭರ ಭಾರತದ ಪರಿಕಲ್ಪನೆ ಉತ್ತೇಜಿಸುವ ಹಾಗೂ ಪ್ರದರ್ಶಿಸುವ ಪ್ರಮುಖ ವೇದಿಕೆಯಾಗಬೇಕು ಎಂದರು.
ಸ್ಥಳೀಯ ಉತ್ಪನ್ನಗಳು,ಕೈ ಮಗ್ಗ, ಕರಕುಶಲ ವಸ್ತುಗಳು, ಸಾವಯವ ಆಹಾರ, ಆರ್ಯುವೇದ ಉತ್ಪನ್ನಗಳು ಹಾಗೂ ದೇಶಿ ಆಟಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಯುವಶಕ್ತಿ ಅರ್ಥಿಕ ಸ್ವಾವಲಂಬನೆ ಪಡೆಯಲು ಇಂತಹ ಮೇಳಗಳು ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮಲೆನಾಡಿನಲ್ಲಿ ಯಶಸ್ಸು ಕಂಡ ಇಂತಹ ಮೇಳಗಳನ್ನು ಹಲವು ಕಡೆ ಆಯೋಜಿಸಲು ಆಯೋಜಕರು ಚಿಂತನೆ ಮಾಡಬೇಕು.ನೇರ ಮಾರುಕಟ್ಟೆ ಒದಗಿಸುವ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜಿಸುವ ಇಂತಹ ಮೇಳಗಳು ಮಲೆನಾಡಿನಲ್ಲಿ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.
ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್ ಮಾತನಾಡಿ, ಸ್ವಯಂ ಉದ್ಯೋಗಕ್ಕೆ ಮಲೆನಾಡಿನಲ್ಲಿ ಹೆಚ್ಚು ಅವಕಾಶವಿದೆ. ನಮ್ಮಲ್ಲಿ ಹಲಸು ಸುಲಭವಾಗಿ ಬೆಳೆಯುವ ಬೆಳೆಯಾಗಿದ್ದು, ಯುವಕರು ಹಲಸಿನ ಹಣ್ಣಿನಿಂದ ಆಗುವ ಖ್ಯಾದಗಳನ್ನು ತಯಾರಿಸುವ ಪ್ರಕ್ರಿಯೆಗೆ ಮುಂದಾಗಬೇಕಿದೆ. ಸ್ಥಳೀಯರಿಗೆ ಅರ್ಥಿಕ ಸಬಲತೆ ಪಡೆಯಲು ಹಾಗೂ ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಸ್ವದೇಶಿ ಮೇಳ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net