ಟಾಸ್ಕ್ ಪೋರ್ಸ್ ಸಮಿತಿ ಅವಧಿ 2026 ಜುಲೈವರೆಗೆ ಅವಧಿ ವಿಸ್ತರಣೆ

ಟಿ.ಡಿ.ರಾಜೇಗೌಡ
ಟಿ.ಡಿ.ರಾಜೇಗೌಡ
Published on
ಎನ್.ಆರ್.ಪುರ: ಈ ಹಿಂದೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಜಿಲ್ಲೆಯ 5 ತಾಲೂಕುಗಳ 55 ಸಾವಿರ ಹೆಕ್ಟೇರ್ ಜಾಗವನ್ನು ಅರಣ್ಯ ಎಂದು ಘೋಷಣೆ ಮಾಡಿದ್ದು ಅದನ್ನು ಮತ್ತೆ ಸರ್ವೇ ಮಾಡಿ ಕಂದಾಯ ಹಾಗೂ ಅರಣ್ಯ ಜಮೀನನ್ನು ಗುರುತಿಸಲು ಸರ್ಕಾರವು ಟಾಸ್ಕ್‌ಪೋರ್ಸ ಸಮಿತಿ ರಚಿಸಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಅಳಲಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ 2016 ರಿಂದ 2018ರ ವರೆಗೆ ಟಾಸ್ಕ್ ಪೋರ್ಸ್ ಸಮಿತಿಯು 55 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿನ ಜನವಸತಿ ಪ್ರದೇಶವನ್ನು ಗುರುತಿಸಿ 10 ಸಾವಿರ ಹೆಕ್ಟೇರ್ ಪ್ರದೇಶವನ್ನು ಕಡಿತಗೊಳಿಸಿತ್ತು. 2018ರ ನಂತರ ಟಾಸ್ಕ್ ಪೋರ್ಸ್ ಸಮಿತಿ ರದ್ದಾಗಿತ್ತು. ಅರಣ್ಯಇಲಾಖೆ ಹಾಗೂ ಕಂದಾಯ ಇಲಾಖೆ ತಪ್ಪಿನಿಂದಾಗಿ 55 ಸಾವಿರ ಹೆಕ್ಚೇರ್ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಜನರಿಗೆ 94 ಸಿ ಅಡಿ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ ಎಂದರು.
ಬದುಕಿಗಾಗಿ ಒತ್ತುವರಿ ಮಾಡಿಕೊಂಡವರು ಾರ್ಮ್ ನಂಬರ್ 53,57 ರಲ್ಲಿ ಅರ್ಜಿ ಸಲ್ಲಿಸಿದ್ದರೂ ಸಾಗುವಳಿ ಚೀಟಿ ನೀಡಲು ಸಾಧ್ಯವಾಗಿರಲಿಲ್ಲ. ಇದರಲ್ಲಿ ಕಂದಾಯ ಹಾಗೂ ಅರಣ್ಯದ ಗಡಿ ಗುರುತನ್ನು ಸರಿಯಾದ ರೀತಿಯಲ್ಲಿ ಸರ್ವೇ ಮಾಡಬೇಕು. ಈ ಹಿಂದೆ ಇದ್ದ ಜಂಟಿ ಮೋಜಣಿ ತಂಡಗಳು, ಜಿಲ್ಲಾಮಟ್ಟದ ಮೇಲ್ವೀಚಾರಣಾ ಸಮಿತಿ ಹಾಗೂ ಟಾಸ್ಕ್ ಪೋರ್ಸ್ ಕಾಲಾವಧಿಯನ್ನು 2026ರ ಜುಲೈವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಅವೈಜ್ಞಾನಿಕವಾಗಿ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಲಾಗಿದೆ. 2 ವರ್ಷ ಸತತ ಹೋರಾಟ ಮಾಡಿ ಟಾರ್ಸ್‌ಪೋರ್ಸ್ ಸಮಿತಿ ರಚಿಸಲಾಗಿ ಸರ್ಕಾರಿ ಕಟ್ಟಡ, ರಸ್ತೆ, ಗುಂಪು ಮನೆಗಳು, ರೈತರ ಒತ್ತುವರಿ ಜಮೀನು ಬಿಟ್ಟು ಜಂಟಿ ಸರ್ವೇ ನಡೆಸಿ ಕಂದಾಯ ಭೂಮಿ ಗುರುತು ಮಾಡಿದ ನಂತರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. ನಂತರ ಅರ್ಜಿ ನೀಡಿದವರಿಗೆ ಹಕ್ಕುಪತ್ರ ನೀಡಲಾಗುವುದು ಎಂದು ಭರವಸೆ ನೀಡಿದರು.
ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುಖಂಡರಾದ ಎಸ್.ಡಿ.ರಾಜೇಂದ್ರ, ಚೆರಿಯನ್, ಪ್ರಶಾಂತಶೆಟ್ಟಿ, ಲೋಕೇಶ್ ಇದ್ದರು.

ರಸ್ತೆ ಗುಂಡಿ ಮುಚ್ಚಲು ಪ್ರಾರಂಭ

ಮಳೆಗಾಲ ಮುಗಿದಿರುವುದರಿಂದ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಾರಂಭವಾಗಿದೆ. ವಿಶೇಷ ಅನುದಾನ ಬಿಡುಗಡೆಯಾಗಿದ್ದು, ಅಗತ್ಯವಿರುವ ಕಡೆ ರಸ್ತೆ ಮರುಡಾಂಬರೀಕರಣ ಮಾಡಲಾಗುವುದು. ರಸ್ತೆಯಲ್ಲಿ ಬರುವ ಜಂಗಲ್ ಕ್ಲಿಯರ್ ಮಾಡಲಾಗುವುದು. ಎಲ್ಲ ಕಡೆ ಚರಂಡಿ ದುರಸ್ತಿ ಮಾಡಲಾಗುವುದು. ಕಳಪೆ ಕಾಮಗಾರಿ ಮಾಡದರೆ ತಕ್ಷಣ ನನ್ನ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net