ನಾಮಫಲಕ ಕಿತ್ತುಹಾಕಿದವರ ವಿರುದ್ಧ ಕ್ರಮಕೈಗೊಳ್ಳಿ

ಎನ್.ಆರ್.ಪುರ ತಾಪಂ ಆವರಣದಲ್ಲಿ ಶಾಸಕರ ಕಚೇರಿ ಮುಂದಿದ್ದ ಟಿ.ಡಿ.ರಾಜೇಗೌಡ ಹೆಸರಿನ ನಾಮಫಲಕ ಕಿತ್ತು ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಲಾಯಿತು.
ಎನ್.ಆರ್.ಪುರ ತಾಪಂ ಆವರಣದಲ್ಲಿ ಶಾಸಕರ ಕಚೇರಿ ಮುಂದಿದ್ದ ಟಿ.ಡಿ.ರಾಜೇಗೌಡ ಹೆಸರಿನ ನಾಮಫಲಕ ಕಿತ್ತು ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಲಾಯಿತು.
Published on
ಎನ್.ಆರ್.ಪುರ: ತಾಲೂಕು ಪಂಚಾಯಿತಿ ಆವರಣದಲ್ಲಿ ಶಾಸಕರ ಕಚೇರಿ ಮುಂದಿದ್ದ ಟಿ.ಡಿ.ರಾಜೇಗೌಡ ಹೆಸರಿನ ನಾಮಫಲಕ ಕಿತ್ತು ಹಾಕಿದವರ ವಿರುದ್ಧ ಕ್ರಮಕೈಗೊಳ್ಳ ಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ತಾಲೂಕು ಘಟಕದ ಕಾರ್ಯಕರ್ತರು ಇಒಗೆ ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಎಂ.ಆರ್.ರವಿಶಂಕರ್ ಮಾತನಾಡಿ, ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರುಎಣಿಕೆ ಫಲಿತಾಂಶ ಮೇ 3 ರಂದು ಪ್ರಕಟವಾಗಿದ್ದು, 4ರ ಬೆಳಗ್ಗೆ ಶಾಸಕರ ಕಚೇರಿ ಮುಂಭಾಗದಲ್ಲಿದ್ದ ರಾಜೇಗೌಡರ ನಾಮಫಲಕವನ್ನು ಕೆಲವರು ಕಿತ್ತು ಹಾಕಿದ್ದಾರೆ. ಸರ್ಕಾರಿ ಕಚೇರಿ ಆವರಣದಲ್ಲಿರುವ ನಾಮಫಲಕ ಕಿತ್ತುಹಾಕಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲು ಅಧಿಕಾರಿಗಳು ದೂರು ನೀಡದಿರುವುದು ಸರಿಯಲ್ಲ. ಅಂದು ರಾಜೇಗೌಡರ ಶಾಸಕ ಸ್ಥಾನ ಹೋಗಿದ್ದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಾಗೂ ರಾಜ್ಯಸಚಿವ ಸಂಪುಟ ದರ್ಜೆ ಸ್ಥಾನದ ಅಧಿಕಾರವಿತ್ತು. ಹಾಗಿದ್ದರೂ ಅಧಿಕಾರಿಗಳು ಬಿಜೆಪಿ ಬೆಂಬಲಿತರು ಮಾಡಿದ ಕೃತ್ಯ ತಡೆಯುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.
ಸರ್ಕಾರಿ ಕಚೇರಿ ವ್ಯಾಪ್ತಿಯ ಸಿಸಿ ಟಿವಿ ಪರಿಶೀಲಿಸಿ ಕೃತ್ಯ ಕೈಗೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.ತಾಲೂಕು ಪಂಚಾಯಿತಿ ಆವರಣದಲ್ಲಿ ಅತಿ ಕ್ರಮವಾಗಿ ಪ್ರವೇಶಿಸಿ ಧಿಕ್ಕಾರ ಕೂಗಿರುವುದು ತಪ್ಪು. ತಪ್ಪಿತಸ್ಥರ ವಿರುದ್ಧ ದೂರು ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕು ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಸುನಿಲ್‌ಕುಮಾರ್, ಯುವ ಕಾಂಗ್ರೆಸ್ ಘಟಕದ ರತನ್‌ಗೌಡ ಅರಗಿ, ಕೆಡಿಪಿ ಸದಸ್ಯ ಕೆ.ವಿ.ಸಾಜು, ಮಾಳೂರುದಿಣ್ಣೆ ರಮೇಶ್, ಮುಖಂಡರಾದ ರವಿ, ಪಾನಿ ಶ್ರೀಧರ್, ಸಿಗ್ಬತುಲ್ಲಾ, ಜುಬೇದಾ, ಸುನಿಲ್‌ಕುಮಾರ್, ಗಫಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net