ಕಠಿಣ ಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸು ಸಾಧ್ಯ

ಎನ್.ಆರ್.ಪುರದ ಮೆಣಸೂರು ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಮಲ್ ಡೇ ಸಮಾರಂಭ ನಡೆಯಿತು.
ಎನ್.ಆರ್.ಪುರದ ಮೆಣಸೂರು ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಮಲ್ ಡೇ ಸಮಾರಂಭ ನಡೆಯಿತು.
Published on
ಎನ್.ಆರ್.ಪುರ: ವಿದ್ಯಾರ್ಥಿಗಳು ಕಠಿಣ ಶ್ರಮಪಟ್ಟರೆ ಮಾತ್ರ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದು ಕೆಪಿಸಿಸಿ ಸದಸ್ಯ ಪಿ.ಆರ್.ಸದಾಶಿವ ಹೇಳಿದರು. ಮೆಣಸೂರಿನ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಮಲ್ ಡೇ, ವಿದ್ಯಾರ್ಥಿ ಸಂಘದ ಪದವಿ ಸ್ವೀಕಾರ ಸಮಾರಂಭ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ನಿರ್ದಿಷ್ಟ ಗುರಿ ಇಟ್ಟುಕೊಂಡು ಗುರುಗಳ ಮಾರ್ಗದರ್ಶನ ಪಡೆದುಕೊಂಡು ಅದನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ಗುರುಹಿರಿಯರಿಗೆ, ಪಾಲಕರಿಗೆ ಗೌರವ ಕೊಡುವ ಉತ್ತಮ ಸಂಸ್ಕಾರ, ನಡೆ, ನುಡಿ, ನೈತಿಕತೆ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ವ್ಯವಹಾರಿಕವಾಗಿ ಸಾಮಾನ್ಯಜ್ಞಾನ ಪಡೆಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಲವು ಸವಾಲುಗಳಿದ್ದು ಅವುಗಳನ್ನು ಎದುರಿಸಲು ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲೂ ಉತ್ತಮ ಅವಕಾಶಗಳಿದ್ದು, ಅದರ ಬಗ್ಗೆ ಜ್ಞಾನ ಪಡೆದುಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಜ್ಜು.ಡಿ.ಪೆರುಮಾಯಳ್ ಮಾತನಾಡಿ, ಪಾಲಕರು ಮಕ್ಕಳಿಗೆ ಕಷ್ಟ ಸುಖದ ಬಗ್ಗೆ, ಸಂಪಾದನೆ ಮಾಡುವ ಕಷ್ಟದ ಬಗ್ಗೆ ಅರಿವು ಮೂಡಿಸಬೇಕು. ಪ್ರಸ್ತುತ ದಿನಗಳಲ್ಲಿ ಪಾಲಕರು ಮಕ್ಕಳ ಮೇಲಿನ ಕಾಳಜಿಯಿಂದ ಅವರು ಕೇಳಿದನ್ನು ಕೊಡಿಸುತ್ತಿರುವುದರಿಂದ ಮಕ್ಕಳಿಗೆ ಕಷ್ಟದ ಅರಿವಾಗದೆ ದಾರಿ ತಪ್ಪುತ್ತಿದ್ದಾರೆ ಎಂದರು.
ಕಾರ್ಮೆಲ್ ವಿದ್ಯಾಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಜೋಸಿ ಮಾತನಾಡಿ, ಕಳೆದು ಹೋದ ಸಮಯ ಜೀವನದಲ್ಲಿ ಮತ್ತೆ ಎಂದಿಗೂ ಬರುವುದಿಲ್ಲ. ವರ್ತಮಾನ ಎಂಬುದು ದೇವರು ನಮಗೆ ಕೊಟ್ಟಿರುವ ಉತ್ತಮ ಅವಕಾಶ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿಯೊಂದು ಹೊಸ ಆರಂಭ ಎಂಬುದು ಭರವಸೆ, ಅವಕಾಶ ಮತ್ತು ಬೆಳವಣಿಗೆಗೆ ಸಹಾಯಮಾಡುತ್ತದೆ. ನಿರಂತರ ಪ್ರಯತ್ನ, ಶಿಸ್ತು, ಕಠಿಣ ಶ್ರಮ ಯಶಸ್ಸನ್ನು ತಂದುಕೊಡುತ್ತದೆ ಎಂದರು.
ಪ್ರಾಚಾರ್ಯೆ ಸಿಸ್ಟರ್ ಶುಭಾ ಮಾತನಾಡಿ, ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಉಪನ್ಯಾಸಕರಾದ ಕೆ.ವಿ.ನಾಗರಾಜ್, ಟಿ.ಮಂಜುನಾಥ್, ಸ್ವಪ್ನಹೆಗ್ಡೆ, ನಂದಿನಿ ಆಲಂದೂರು, ಐ.ಎಂ.ರಾಜೀವ, ಅನುಷಾ, ಫ್ರಿಜೀನಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net