ಅದಲು-ಬದಲು ಮಾಡಿ ಶಂಕುಸ್ಥಾಪನೆ

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ
Published on

ಪ್ರಮುಖ ಮುಖ್ಯಾಂಶಗಳು

  • ಯಾವ ದೇವರ ಮುಂದೆ ಬೇಕಾದರೂ ಸತ್ಯ ಮಾಡುತ್ತೇನೆ
  • ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ
ಚಿಕ್ಕಮಗಳೂರು: ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಅನುಷ್ಠಾನಗೊಳ್ಳುತ್ತಿರುವ ಶೇ.೯೫ರಷ್ಟು ಕಾಮಗಾರಿಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಾಗಿವೆ. ಆ ಕಾಮಗಾರಿಗಳನ್ನು ಅದಲು ಬದಲು ಮಾಡಿ ಶಂಕುಸ್ಥಾಪನೆ ಮಾಡುವ ಕೆಲಸವನ್ನು ಕಾಂಗ್ರೆಸ್ ಶಾಸಕರು ಮಾಡುತ್ತಿದ್ದಾರೆ. ಈ ಬಗ್ಗೆ ಯಾವ ದೇವರ ಮುಂದೆ ಬೇಕಾದರೂ ಸತ್ಯ ಮಾಡುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಎಂದಿದ್ದಾರೆ.
ಸುದ್ದಿಗಾರರೊAದಿಗೆ ಮಾತನಾಡಿದ ಅವರು, ೨೦೧೮ ರಿಂದ ೨೩ರ ಅವಧಿಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕೆರೆ ತುಂಬಿಸುವ ಯೋಜನೆ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಒಟ್ಟು ೫,೮೫೭ ಕೋಟಿ ರೂ. ಅನುದಾನ ತೆಗೆದುಕೊಂಡು ಬರಲಾಗಿತ್ತು. ೨೦೨೩ರ ನಂತರ ಬಂದ ಕಾಂಗ್ರೆಸ್ ಸರ್ಕಾರ ಈವರೆಗೆ ೫೦ ರಿಂದ ೫೫ ಕೋಟಿ ರೂ. ಅನುದಾನ ನೀಡಿದೆ. ಬಿಜೆಪಿ ಅವಧಿಯಲ್ಲಿ ಮಂಜೂರು ಮಾಡಿದ ಕಾಮಗಾರಿಗಳನ್ನು ಈಗಿನ ಶಾಸಕರು ಅದಲು ಬದಲು ಮಾಡಿ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಈ ಸತ್ಯವನ್ನು ಜನರಿಗೆ ತಿಳಿಸುವ ಉz್ದÉÃಶದಿಂದ ಕಾಮಗಾರಿ ಸ್ಥಳಕ್ಕೆ ಆಗಮಿಸಿz್ದÉÃನೆ ಎಂದರು.
ಲೋಕೋಪಯೋಗಿ ಇಲಾಖೆಯಿಂದ ೨೧೦ ಕೋಟಿ ರೂ. ವಿಶೇಷ ಅನುದಾನವನ್ನು ೨೦೨೨ರಲ್ಲಿ ಮಂಜೂರು ಮಾಡಿಸಲಾಗಿತ್ತು. ಈ ಪೈಕಿ ರಾಂಪುರ ರಸ್ತೆಯೂ ಒಂದಾಗಿದೆ. ಈ ರಸ್ತೆಗೆ ೮ ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ೨೦೨೩ರ ಮೇ ನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಆರಂಭಿಸದ ಕಾಮಗಾರಿಯನ್ನು ತಡೆ ಹಿಡಿಯುವ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಈ ರಾಂಪುರ ರಸ್ತೆ ಕಾಮಗಾರಿಗೆ ಅಷ್ಟರಲ್ಲಿ ಟೆಂಡರ್ ಆಗಿತ್ತು. ಆದರೆ ಕಾರ್ಯಾದೇಶ ನೀಡಿರಲಿಲ್ಲ. ೨೦೨೪ರದ ಜುಲೈನಲ್ಲಿ ಕಾರ್ಯಾದೇಶ ನೀಡಿದ್ದರು. ೧೦ ಮೀಟರ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ರಸ್ತೆಯಲ್ಲಿ ವಿದ್ಯುತ್ ಕಂಬ ಮತ್ತು ಮರ ಅಡ್ಡವಾದ ಹಿನ್ನೆಲೆಯಲ್ಲಿ ವಿದ್ಯುತ್ ಕಂಬ ಸ್ಥಳಾಂತರಕ್ಕೆ ಮತ್ತು ಮರ ತೆರವಿಗೆ ಕಳೆದ ೨೦೨೬ರ ಜನವರಿ ೨೯ರಲ್ಲಿ ಕಾರ್ಯದೇಶ ನೀಡಲಾಗಿದೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ ಎಂದು ಹೇಳಿದರು.
ಬಹಳ ದಿನ ಈ ಅಧಿಕಾರದ ದರ್ಪ ನಡೆಯುವುದಿಲ್ಲ. ಅಧಿಕಾರದ ದರ್ಪ ತೋರಿಸಿದವರು ಹೆಚ್ಚು ದಿನ ಉಳಿಯುವುದಿಲ್ಲ. ನಾನು ಕಾಣದಿರುವ ಅಧಿಕಾರವಲ್ಲ. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಮಂತ್ರಿಯಾಗಿ, ಈಗ ವಿಧಾನಪರಿಷತ್ ಸದಸ್ಯನಾಗಿ ಅಭಿವೃದ್ಧಿ ಕೆಲಸ ಮಾಡಿz್ದÉÃನೆ. ಬಿಜೆಪಿ ಪಕ್ಷದ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಯಾಗಿ ಬೇರೆ ಬೇರೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಿz್ದÉÃನೆ ಎಂದರು.
ಅಭಿವೃದ್ಧಿ ವಿಚಾರದಲ್ಲಿ ಚಿಲ್ಲರೆ ರಾಜಕಾರಣ ಮಾಡಬಾರದು ಎಂದು ಸುಮ್ಮನಿz್ದÉÃವೆ. ಕಾಂಗ್ರೆಸ್ ಶಾಸಕರು ಹೋದಲ್ಲಿ, ಬಂದಲ್ಲಿ ಧಿಕ್ಕಾರ ಕೂಗಿಸುವುದು ಕಷ್ಟದ ಕೆಲಸವಲ್ಲ. ಸಿ.ಟಿ.ರವಿ ಕೋಟಾ ನೋಟು ಚಲಾವಣೆ ರಾಜಕಾರಣಿ ಅಲ್ಲ. ಕೋಟಾ ನೋಟ್‌ನಿಂದ ಗುಬ್ಬಿ ಹಳ್ಳಿಯಲ್ಲಿ ಅಮಾಯಕನ ಸಾವಿಗೆ ಕಾರಣ ಯಾರು ಎಂಬುದು ಜಗತ್ತಿಗೆ ಗೊತ್ತಿದೆ. ನಕಲಿ ಮದ್ಯ ಪೂರೈಕೆ ಮಾಡುತ್ತಿರುವ ಕಿಂಗ್ ಪಿನ್‌ಗೆ ಸಹಕಾರ ನೀಡಿ, ಬಡವರ ಮನೆ ಹಾಳು ಮಾಡುತ್ತಿರುವ ಶಾಸಕ ನಾನಲ್ಲ ಎಂದು ವಾಗ್ದಾಳಿ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net