ಕೂಟಮಹಾ ಜಗತ್ತು ಸಾಲಿಗ್ರಾಮ ಕಳಸ-ಬಾಳೆಹೊಳೆ ಅಂಗ ಸಂಸ್ಥೆಯಿಂದ ಮಾವಿನಕುಡಿಗೆ ವೇದಬ್ರಹ್ಮ ಸುಬ್ರಹ್ಮಣ್ಯ ಭಟ್ಟರಿಗೆ ಮರಣೋತ್ತರ ಪ್ರಶಸ್ತಿಯನ್ನು ಅವರ ಪತ್ನಿ ಶಾರದಾಗೆ ಪ್ರದಾನ ಮಾಡಲಾಯಿತು. ಗಣೇಶಮೂರ್ತಿ ನಾವುಡ, ಲೀಲಾವತಿ, ಜಯಗಣಪತಿ ಹೆಬ್ಬಾರ್ ಇದ್ದರು.
Published on:
Copied
Follow Us
ಕಳಸ: ಸನಾತನ ಸಂಸ್ಕೃತಿಗೆ ಸುಬ್ರಹ್ಮಣ್ಯ ಭಟ್ ಕೊಡುಗೆ ಅಪಾರ ಎಂದು ಕರ್ಣಾಟಕ ಬ್ಯಾಂಕ್ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ಮಹಾಬಲೇಶ್ವರ ಭಟ್ ಹೇಳಿದರು.
ಬಾಳೆಹೊಳೆ ಚನ್ನಕೇಶವ ದೇವಸ್ಥಾನ ಸಭಾಂಗಣದಲ್ಲಿ ಕೂಟ ಮಹಾಜಗತ್ತು ಸಾಲಿಗ್ರಾಮ ಕಳಸ-ಬಾಳೆಹೊಳೆ ಅಂಗಸಂಸ್ಥೆಯಿಂದ ಮಾವಿನಕುಡಿಗೆಯ ವೇದಬ್ರಹ್ಮ ಸುಬ್ರಹ್ಮಣ್ಯ ಭಟ್ ಅವರಿಗೆ ಮರಣೋತ್ತರ ಪ್ರಶಸ್ತಿ ಪ್ರದಾನ ಹಾಗೂ ತಲಗೋಡಿನ ಜಯಗಣಪತಿ ಹೆಬ್ಬಾರ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಶಸ್ತಿಗಳ ಹಿಂದೆ ಹೋಗಬಾರದು. ನಾವು ನಿಷ್ಠೆಯಿಂದ ಸಮಾಜ ಸೇವಾ ಕಾರ್ಯಗಳನ್ನು ಮಾಡಿದಾಗ ಪ್ರಶಸ್ತಿಗಳು ತನ್ನಿಂದ ತಾನೇ ಬರುತ್ತವೆ. ಸುಬ್ರಹ್ಮಣ್ಯ ಭಟ್ಟ ಅವರು ಅದನ್ನೇ ಮಾಡಿದ್ದರು ಹಾಗೂ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು ಎಂದು ಹೇಳಿದರು.
ಹೊರನಾಡು ಕ್ಷೇತ್ರದ ಧರ್ಮಕರ್ತ ಶ್ರೀ ಭೀಮೇಶ್ವರ ಜೋಷಿ ಮಾತನಾಡಿ, ಈ ಎರಡು ಚೇತನಗಳು ಅಗಲಿರುವುದು ಸಮುದಾಯಕ್ಕೆ ತುಂಬಲಾರದ ನಷ್ಟ ಎಂದರು.
ಸುಬ್ರಹ್ಮಣ್ಯ ಭಟ್ಟ ಅವರಿಗೆ ಧರ್ಮಶಾಸ್ತ್ರ ಭೂಷಣ ಬಿರುದಿನೊಂದಿಗೆ ಮರಣೋತ್ತರ ಪ್ರಶಸ್ತಿಯನ್ನು ಅವರ ಪತ್ನಿ ಶಾರದಾ ಸುಬ್ರಹ್ಮಣ್ಯ ಭಟ್‌ಗೆ ನೀಡಲಾಯಿತು. ಕೂಟಮಹಾಜಗತ್ತು ಸಾಲಿಗ್ರಾಮ ಕಳಸ-ಬಾಳೆಹೊಳೆ ಅಂಗಸಂಸ್ಥೆಯಿಂದ ಪ್ರತಿವರ್ಷ ನಡೆಯುವ ವಸಂತ ವೇದ ಶಿಬಿರದ ಶಿಕ್ಷಕರ ವೇತನಕ್ಕಾಗಿ ಸುಬ್ರಹ್ಮಣ್ಯ ಭಟ್ ಅವರ ಪುತ್ರ ಎಂ.ಎಸ್.ಮಹಾಬಲೇಶ್ವರ ಭಟ್ 5 ಲಕ್ಷ ರೂ. ದೇಣಿಗೆ ನೀಡಿದರು.
ಕೂಟಮಹಾ ಜಗತ್ತು ಕಳಸ-ಬಾಳೆಹೊಳೆ ಅಂಗಸಂಸ್ಥೆಯ ಅಧ್ಯಕ್ಷ ಕೆ.ಕೆ.ಬಾಲಕೃಷ್ಣ ಭಟ್, ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಗಣೇಶಮೂರ್ತಿ ನಾವುಡ, ಲೀಲಾವತಿ, ಜಯಗಣಪತಿ ಹೆಬ್ಬಾರ್ ಇದ್ದರು.