ಎಸ್‌ಐಆರ್‌ನಲ್ಲಿ ಕೊಪ್ಪದ 243 ಹೆಸರು ಕೈಬಿಡಲು ಫಾರ್ಮ್ ನಂ. 7 ಸಲ್ಲಿಕೆ

ಮತದಾರ ಹೆಸರು ತೆಗೆಯಲು ಅರ್ಜಿ ಸಲ್ಲಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.  ಅನ್ನಪೂರ್ಣ ನರೇಶ್, ನುಗ್ಗಿ ಮಂಜುನಾಥ್, ಎಚ್.ಎಸ್.ಇನೇಶ್, ನವೀನ್ ಮಾವಿನಕಟ್ಟೆ ಇದ್ದರು.
ಮತದಾರ ಹೆಸರು ತೆಗೆಯಲು ಅರ್ಜಿ ಸಲ್ಲಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅನ್ನಪೂರ್ಣ ನರೇಶ್, ನುಗ್ಗಿ ಮಂಜುನಾಥ್, ಎಚ್.ಎಸ್.ಇನೇಶ್, ನವೀನ್ ಮಾವಿನಕಟ್ಟೆ ಇದ್ದರು.
Published on: 

ಕೊಪ್ಪ: ಎಸ್‌ಐಆರ್ ಪ್ರಕ್ರಿಯೆ ವೇಳೆ ಬಿಜೆಪಿ ಮುಖಂಡರು ತಾಲೂಕಿನಲ್ಲಿ 243 ಅಲ್ಪ ಸಂಖ್ಯಾತ ಮತದಾರರನ್ನು ಮತದಾರ ಪಟ್ಟಿಯಿಂದ ಕೈಬಿಡಲು ಫಾರ್ಮ್ ನಂ.7 ಸಲ್ಲಿಸಿದ್ದು, ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲು ಫಾರ್ಮ್ ನಂ.7 ಸಲ್ಲಿಸಿದವರು ದರೋಡೆಕೋರರು. ಸ್ವಾರ್ಥ ರಾಜಕಾರಣಕ್ಕಾಗಿ ಮತದಾರರ ಹೆಸರು ತೆಗೆಯುತ್ತಾರೆ ಎಂದರೆ ಎಂತಹ ಕೀಳುಮಟ್ಟದವರು. ಎನ್.ಆರ್.ಪುರದಲ್ಲಿ 1363 ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಮತದಾರರ ಹೆಸರು ಪಟ್ಟಿಯಿಂದ ತೆಗೆಯಲು ಅರ್ಜಿ ಕೊಟ್ಟಿದ್ದಾರೆ. ಅನಾಥಾಶ್ರಮಕ್ಕೆ ಸೇರಿದ 19 ಮತದಾರರ ಹೆಸರು ಕೈಬಿಡಲು ಅರ್ಜಿ ಕೊಟ್ಟಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸುವ ಭಯದಿಂದ ಅರ್ಜಿ ಸುಟ್ಟು ಹಾಕಿದ್ದಾರೆ. ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಹೆಸರು ತೆಗೆಯುವ ಉದ್ದೇಶದಿಂದ ಮತದಾರ ಸ್ಥಳಾಂತರ, ಡಬಲ್ ಎಂಟ್ರಿ ಎಂದು ಕೊಟ್ಟಿದ್ದಾರೆ. ಅಲ್ಪ ಸಂಖ್ಯಾತ, ದಲಿತ, ಹಿಂದುಳಿದ ವರ್ಗದವರು ಇವರಿಗೆ ಮತ ಹಾಕುವುದಿಲ್ಲ ಎಂದು ಅವರ ಮತಗಳನ್ನು ತೆಗೆಯಲು ಹೊರಟಿದ್ದಾರೆ. ಮತದಾರ ಪಟ್ಟಿಯಲ್ಲಿ ಹೆಸರು ತೆಗೆಯಲು ಅರ್ಜಿ ಕೊಟ್ಟ ಪ್ರಮುಖರನ್ನು 5 ದಿನಗಳೋಳಗೆ ಎಫ್‌ಐಆರ್ ದಾಖಲು ಮಾಡಬೇಕು ಇಲ್ಲವಾದಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡ ಡಿ.ಎಸ್.ವಿಶ್ವನಾಥ ಶೆಟ್ಟಿ ಮಾತನಾಡಿ, ಬಿಜೆಪಿಗೆ ಬೇಡದ ಮತಗಳನ್ನು ತೆಗೆದುಹಾಕಿ ಅಧಿಕಾರದಲ್ಲಿ ಉಳಿದುಕೊಳ್ಳಬೇಕು ಎಂಬ ಹುನ್ನಾರ ನಡೆಸಿದೆ. 243 ಅಲ್ಪ ಸಂಖ್ಯಾತರನ್ನು ತೆಗೆದುಹಾಕಬೇಕು ಎಂದು ಇಲ್ಲಿನ ಬಿಜೆಪಿ ಅಧ್ಯಕ್ಷ ಎಚ್.ಕೆ.ದಿನೇಶ್ ಅರ್ಜಿ ಕೊಟ್ಟಿದ್ದಾರೆ. ಬಿಜೆಪಿ ಸಿದ್ದಾಂತ ವಿರೋಧ ಮಾಡುತ್ತಿರುವರನ್ನು ಬಿಜೆಪಿ ಟಾರ್ಗೆಟ್ ಮಾಡುತ್ತಿದೆ’ ಎಂದರು.

ತಹಸೀಲ್ದಾರ್ ಲಿಖಿತ ಮೋಹನ್ ಮಾತನಾಡಿ, ಅರ್ಜಿ ಕೊಟ್ಟವರ ಹೆಸರನ್ನು ಇದುವರೆಗೂ ಡಿಲೀಟ್ ಮಾಡಿಲ್ಲ. ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಫಾರ್ಮ್ ನಂ.7 ಮೂಲಕ ಮತದಾರ ಹೆಸರು ತೆಗೆಯಲು ಅರ್ಜಿ ಸಲ್ಲಿಸಿದವರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್ ಲಿಖಿತ ಮೋಹನ್ ಮನವಿ ಸಲ್ಲಿಸಲಾಯಿತು. ಅನ್ನಪೂರ್ಣ ನರೇಶ್, ನುಗ್ಗಿ ಮಂಜುನಾಥ್, ಎಚ್.ಎಸ್.ಇನೇಶ್, ನವೀನ್ ಮಾವಿನಕಟ್ಟೆ, ಸಾಧಿಕ್, ರಾಜಶಂಕರ್, ಬಿ.ಪಿ.ಚಿಂತನ್, ಓಣಿತೋಟ ರತ್ನಾಕರ್, ಜೇಸುದಾಸ್, ರಾಮಪ್ಪ, ಪ್ರಕಾಶ್ ಪೂಜಾರಿ, ಕೆ.ಟಿ.ಮಿತ್ರ, ದೀಪಕ್, ಸಂತೋಷ್ ಕುಲಾಸೋ, ದುರ್ಗಾಚರಣ್, ವಿಜಯಾನಂದ ಇದ್ದರು.

ಮತದಾರ ಹೆಸರು ತೆಗೆಯಲು ಅರ್ಜಿ ಸಲ್ಲಿಸಿರುವ ಬಗ್ಗೆ ನಾನು ನಿಮ್ಮ ವಿಡಿಯೋ ನೋಡಿದ್ದರಿಂದ ತಾಲೂಕು ಕಚೇರಿಗೆ ಬಂದಿದ್ದು, ಅರ್ಹ ಮತದಾರರ ಹೆಸರು ಬಿಟ್ಟು ಹೋಗಬಾರದು. ಯಾರನ್ನೂ ಹೆಚ್ಚುವರಿಯಾಗಿ ಸೇರಿಸಬಾರದು.

ಸುಧಾಕರ ಎಸ್.ಶೆಟ್ಟಿ ಜೆಡಿಎಸ್ ರಾಷ್ಟ್ರೀಯ ವಕ್ತಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net