ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಕುರಿತು ಜಾಗೃತಿ ಅಗತ್ಯ

ಬಾಳೆಹೊನ್ನೂರಿನ ಎಸ್‌ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಬಾಳೆಹೊನ್ನೂರಿನ ಎಸ್‌ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
Published on
ಬಾಳೆಹೊನ್ನೂರು: ತಂಬಾಕು ಸೇವನೆ ಮಾತ್ರ ಮಾದಕ ದ್ರವ್ಯ ಸೇವನೆಯಲ್ಲ. ನಮ್ಮ ಜೀವನ ಆರಂಭವಾಗುವುದೇ ಮಾದಕ ವಸ್ತುಗಳಿಂದ ಈ ಹಿನ್ನೆಲೆಯಲ್ಲಿ ಮಾದಕ ವಸ್ತುಗಳ ಕುರಿತು ಜಾಗೃತವಾಗಿರಬೇಕು ಎಂದು ಪಿಎಸ್‌ಐ ಅಂಬರೀಷ್ ಹೇಳಿದರು.
ಎಸ್‌ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿನಿತ್ಯದ ಜೀವನ ವಿಧಾನದಲ್ಲಿ ನಾವು ಮಾದಕ ವಸ್ತುಗಳೊಂದಿಗೆ ಬದುಕುತ್ತಿದ್ದೇವೆ. ಬೆಳಗ್ಗೆ ಎದ್ದ ತಕ್ಷಣ ಬ್ರಶ್ ಮಾಡುವುದರಿಂದ ಆರಂಭವಾಗಿ ಮಲಗುವ ತನಕವೂ ವಿವಿಧ ರೀತಿಯ ಮಾದಕ ವಸ್ತುಗಳನ್ನು ನಾವು ಸೇವಿಸುತ್ತಿದ್ದು ಆರೋಗ್ಯ ಹಾಳಾಗುತ್ತಿದೆ. ಇದರಿಂದ ನಾವು ಜಾಗೃತವಾಗಬೇಕಿದೆ ಎಂದರು.
ಡ್ರಗ್ಸ್ ಎಂದರೆ ಕೇವಲ ಇಂಜೆಕ್ಷನ್‌ನಲ್ಲಿ ತೆಗೆದುಕೊಳ್ಳುವುದು ಮಾತ್ರವಲ್ಲ. ಮದ್ಯ ಕುಡಿಯುವುದರಿಂದ, ಧೂಮಪಾನ ಸೇದುವುದರಿಂದ ಬರುತ್ತದೆ. ಪಾಲಕರು ಮಕ್ಕಳ ಎದುರಿಗೆ ಸಿಗರೇಟ್ ಸೇದುವುದು, ಮದ್ಯಪಾನ ಮಾಡಬಾರದು. ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆಧುನಿಕತೆಗೆ ಮಾರು ಹೋಗಿ ತಮ್ಮ ಮಕ್ಕಳ ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದರು.
ಪ್ರಾಚಾರ್ಯ ಕೆ.ಆರ್.ಭೂದೇಶ, ಹಿರಿಯ ಶಿಕ್ಷಕ ಬಿ.ಎಸ್.ಕುಮಾರಚಂದ್ರ ನಾಯಕ್, ಕೆ.ಎಂ.ರಾಕೇಶ್, ಪ್ರಶಾಂತ್ ಕುಮಾರ್, ನಟರಾಜ್ ನಾಯಕ್, ರಮ್ಯ, ನಿಶಿತ ಪೂಜಾರಿ, ವಿದ್ಯಾ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net