ಶಿಕ್ಷಕ ರಾಮಪ್ಪ ಚಲವಾದಿ ಮಾತನಾಡಿ, ವಿಜಯ್‌ಸಂಕೇಶ್ವರ ಅವರು ಮಕ್ಕಳಿಗೆ ಉಚಿತವಾಗಿ ಪಠ್ಯಕ್ಕೆ ಪೂರಕ, ಅಂಕಗಳಿಕೆಗೆ, ಕಲಿಕೆಗೆ ಸಹಾಯವಾಗುವಂತೆ ಪತ್ರಿಕೆಯನ್ನು ಹೊರ ತರುತ್ತಿರುವುದು ಶ್ಲಾಘನೀಯವಾಗಿದೆ. ಮಕ್ಕಳು ಈ ಪತ್ರಿಕೆಯನ್ನು ಪ್ರತಿ ನಿತ್ಯ ಓದಬೇಕು. ಅಲ್ಲದೆ ಕನ್ನಡ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.