ಸಂಘಟನೆಯ ಮೂಲಕ ಸಮಾಜ ಭದ್ರಗೊಳಿಸಿ

ಬಾಳೆಹೊನ್ನೂರಿನಲ್ಲಿ ಆರ್‌ಎಸ್‌ಎಸ್‌ನಿಂದ ಗುರುಪೂಜಾ ಉತ್ಸವ ಕಾರ್ಯಕ್ರಮ ನಡೆಯಿತು. ಗುರುಪ್ರಸಾದ್, ಸುನೀಲ್ ಕಲ್ಮಕ್ಕಿ, ಕೃಷ್ಣಪ್ಪ ಮೇಲ್ಪಾಲ್, ಸಚಿನ್ ಸೀಕೆ, ವಿನಯ್‌ಕುಮಾರ್, ಅಖಿಲೇಶ್, ಪ್ರಕಾಶ್ ಮುದುಗುಣಿ, ಗಣೇಶ್ ಮತ್ತಿತರರಿದ್ದರು.
ಬಾಳೆಹೊನ್ನೂರಿನಲ್ಲಿ ಆರ್‌ಎಸ್‌ಎಸ್‌ನಿಂದ ಗುರುಪೂಜಾ ಉತ್ಸವ ಕಾರ್ಯಕ್ರಮ ನಡೆಯಿತು. ಗುರುಪ್ರಸಾದ್, ಸುನೀಲ್ ಕಲ್ಮಕ್ಕಿ, ಕೃಷ್ಣಪ್ಪ ಮೇಲ್ಪಾಲ್, ಸಚಿನ್ ಸೀಕೆ, ವಿನಯ್‌ಕುಮಾರ್, ಅಖಿಲೇಶ್, ಪ್ರಕಾಶ್ ಮುದುಗುಣಿ, ಗಣೇಶ್ ಮತ್ತಿತರರಿದ್ದರು.
Published on
ಬಾಳೆಹೊನ್ನೂರು: ಕಲಿಯುಗದಲ್ಲಿ ಸಂಘಟನೆ ಮೂಲಕ ಸಮಾಜವನ್ನು ಭದ್ರಗೊಳಿಸಬೇಕಿದೆ ಎಂದು ಆರ್‌ಎಸ್‌ಎಸ್ ಹಾಸನ ವಿಭಾಗದ ಪ್ರಚಾರಕ್ ಮಂಜುನಾಥ್ ಹೇಳಿದರು.
ಆರ್‌ಎಸ್‌ಎಸ್ ಆಯೋಜಿಸಿದ್ದ ಗುರುಪೂರ್ಣಿಮಾ ಸಮಾರಂಭದಲ್ಲಿ ಮಾತನಾಡಿ, ಗುರುಪೂರ್ಣಿಮೆ ಎಂಬುದು ಗುರುಗಳಿಗೆ ವಂದನೆ ಸಲ್ಲಿಸುವ ದಿನ. ಜ್ಞಾನ, ತ್ಯಾಗ, ಸಮರ್ಪಣೆಯನ್ನು ಕಲಿಸಿಕೊಟ್ಟ ಗುರು, ಮನುಷ್ಯ ಹೇಗೆ ಬದುಕಬೇಕು, ಅವನು ಯಾವ ದಾರಿಯಲ್ಲಿ ನಡೆಯಬೇಕು ಎಂಬುದನ್ನು ಹೇಳಿಕೊಟ್ಟಿದ್ದಾನೆ. ಮುಂದೆ ಗುರಿ, ಹಿಂದೆ ಗುರು ಇರಬೇಕು ಎಂಬಂತೆ ನಾವು ಮಾಡುವ ಎಲ್ಲ ಮಹತ್ತರ ಕಾರ್ಯಕ್ಕೆ ಒಬ್ಬ ಗುರು ಇದ್ದೇ ಇರುತ್ತಾರೆ ಎಂದರು. 
ಸಂಘದ ಗುರುಪೂಜೆ ಉತ್ಸವವು ಸಮಾಜ ಮತ್ತು ದೇಶ ಎನ್ನುವ ಕುಟುಂಬದ ಬೆಳವಣಿಗೆಗಾಗಿ ಮಾಡಿ ಗುರು ಕಾಣಿಕೆಯನ್ನು ಸಮರ್ಪಣೆ ಮಾಡುವುದಾಗಿದೆ. ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎನ್ನುವುದು ನಮ್ಮ ಧ್ಯೇಯವಾಗಿದ್ದು, ಸಮಾಜದಿಂದ ಬಂದ ಹಣವನ್ನು ಗುರುಪೂಜೆ ಮೂಲಕ ಭಾರತ ಮಾತೆಗೆ ಸಮರ್ಪಣೆ ಮಾಡಲಾಗುತ್ತಿದೆ. ನಾವು ಸಮರ್ಪಣೆ ಮಾಡಿದ್ದು ಧರ್ಮದ ಕಾರ್ಯಗಳಿಗಾಗಿ ವಿನಿಯೋಗಿಸಲಾಗುತ್ತಿದೆ ಎಂದರು.
ಕೃಷಿಕ ಹರೀಶ್ ಬಾಳೆಗದ್ದೆ ಮಾತನಾಡಿ, ಆರ್‌ಎಸ್‌ಎಸ್ ಶಿಸ್ತು, ಶ್ರದ್ಧೆ, ದೇಶಭಕ್ತಿ ಎಲ್ಲ ಹಿಂದೂಗಳಿಗೂ ಮಾದರಿಯಾಗಿದ್ದು ಒಗ್ಗೂಡಿ ಸಮಾಜವನ್ನು ಬಲಗೊಳಿಸಬೇಕಿದೆ ಎಂದರು.
 ಸ್ವಯಂಸೇವಕರಾದ ಗುರುಪ್ರಸಾದ್, ಸುನೀಲ್ ಕಲ್ಮಕ್ಕಿ, ಕೃಷ್ಣಪ್ಪ ಮೇಲ್ಪಾಲ್, ಸಚಿನ್ ಸೀಕೆ, ವಿನಯ್‌ಕುಮಾರ್, ಅಖಿಲೇಶ್, ಪ್ರಕಾಶ್ ಮುದುಗುಣಿ, ಗಣೇಶ್, ಮಂಜುನಾಥ್ ರೇಣುಕನಗರ, ಕಾರ್ತಿಕ್, ಸತೀಶ್ ಕಾಮತ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net