ರೂ.3.50 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿ (stadium-development)

ಕಡೂರಿನ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಶಂಕುಸ್ಥಾಪನೆ  ನೆರವೇರಿಸಿದರು. ಆಸಂದಿ ಕಲ್ಲೇಶ್, ಬಾಸೂರು ಚಂದ್ರಮೌಳಿ, ಅಶೋಕ್ ಮತ್ತಿತರರಿದ್ದರು.
ಕಡೂರಿನ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಎಸ್.ಆನಂದ್ ಶಂಕುಸ್ಥಾಪನೆ ನೆರವೇರಿಸಿದರು. ಆಸಂದಿ ಕಲ್ಲೇಶ್, ಬಾಸೂರು ಚಂದ್ರಮೌಳಿ, ಅಶೋಕ್ ಮತ್ತಿತರರಿದ್ದರು.
Published on
ಕಡೂರು: ಅಂಬೇಡ್ಕರ್ ಕ್ರೀಡಾಂಗಣಕ್ಕೆ ಆಧುನಿಕ ಸ್ಪರ್ಶ ನೀಡಲು 3.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಇಲ್ಲಿನ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಈ ಹಿಂದೆ ಅನುದಾನ ಮಂಜೂರಾತಿ ಪಡೆದಿದ್ದು, ಕ್ರೀಡಾಂಗಣ ಇಳಿಜಾರು ಪ್ರದೇಶದಿಂದ ಕೂಡಿದೆ. ಸುತ್ತಲೂ ಪ್ರದೇಶವನ್ನು  ಸಮತಟ್ಟುಗೊಳಿಸಲಾಗುತ್ತದೆ. ಜತೆಗೆ ಕ್ರೀಡಾಂಗಣದ ಸುತ್ತ ನೀರು ಸರಾಗವಾಗಿ ಹರಿಯಲು ಬಾಕ್ಸ್ ಚರಂಡಿ, ಧ್ವಜಸ್ತಂಭ, ಪ್ರತ್ಯೇಕ ಕ್ರಿಕೆಟ್ ಮತ್ತು ಕಬಡ್ಡಿ ಅಂಕಣಗಳ ನಿರ್ಮಾಣ, ಫುಟ್‌ಬಾಲ್ ಪೆನಾಲ್ಟಿ ಸ್ಟಾೃಂಡ್, ಕ್ರೀಡಾಪಟುಗಳಿಗೆ 200 ಮೀಟರ್‌ನ ಓಟದ ಅಂಕಣ, ಕ್ರೀಡಾ ಪಟುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಗೃಹ ನಿರ್ಮಾಣ ಮಾಡಿ ಕ್ರೀಡಾಂಗಣಕ್ಕೆ ಆಧುನಿಕ ಸ್ಪಶರ್ ನೀಡಲಾಗುವುದು ಎಂದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಬಾಸೂರು ಚಂದ್ರಮೌಳಿ, ಡಿ.ಉಮೇಶ್, ಅಶೋಕ್, ಕ್ರೀಡಾಧಿಕಾರಿ ಮುರಳೀಧರ್, ಗುತ್ತಿಗೆದಾರ ರವಿಶಂಕರ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net