21ಕ್ಕೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಕಚೇರಿ ಉದ್ಘಾಟನೆ

ಎನ್.ಆರ್.ಪುರದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಚೇರಿ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಎಂ.ಎನ್.ನಾಗೇಶ್, ಗದ್ದೇಮನೆ ಸತೀಶ್, ಸಚಿನ್, ಹಂಚಿನಮನೆ ರಾಘವೇಂದ್ರ, ವಿಕಾಸ್ ಇದ್ದರು.
ಎನ್.ಆರ್.ಪುರದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಚೇರಿ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಎಂ.ಎನ್.ನಾಗೇಶ್, ಗದ್ದೇಮನೆ ಸತೀಶ್, ಸಚಿನ್, ಹಂಚಿನಮನೆ ರಾಘವೇಂದ್ರ, ವಿಕಾಸ್ ಇದ್ದರು.
Published on
ಎನ್.ಆರ್.ಪುರ: ತಾಲೂಕು ಕಚೇರಿ ಸಮೀಪದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಕಚೇರಿ ೆ.21ರಂದು ಬೆಳಗ್ಗೆ 10ಕ್ಕೆೆ ಉದ್ಘಾಟನೆಗೊಳ್ಳಲಿದೆ ಎಂದು ಶೃಂಗೇರಿ ರೈತ ಒಕ್ಕೂಟದ ಕಾರ್ಯಾಧ್ಯಕ್ಷ ಎಂ.ಎನ್.ನಾಗೇಶ್ ಹೇಳಿದರು.
21ರಂದು ಕಚೆೇರಿ ಉದ್ಘಾಟನೆಯೊಂದಿಗೆ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಚೇರಿ ಎದುರಿನ ಲಿಟ್ಲ್ ್ಲವರ್ ಚರ್ಚ್ ಸಮುದಾಯ ಭವನದಲ್ಲಿ ನಡೆಯಲಿದೆ. ಒಕ್ಕೂಟದ ಅಧ್ಯಕ್ಷರಾಗಿ ದಾನಿ ವಿಶ್ವನಾಥ್ ಗದ್ದೇಮನೆ ಹಾಗೂ ಗೌರವಾಧ್ಯಕ್ಷರಾಗಿ ರಾಮಸ್ವಾಮಿ ಶೆಟ್ಟಿಗದ್ದೆ ಹಾಗೂ ಕಾರ್ಯಾಧ್ಯಕ್ಷರಾಗಿ ನಾಗೇಶ್ ಆಯ್ಕೆಯಾಗಿದ್ದು, ಉಳಿದ ಪದಾಧಿಕಾರಿಗಳನ್ನು ಅಂದು ಅಧಿಕೃತವಾಗಿ ಘೋಷಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೇಗಿಲಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸಮಾರಂಭ ಉದ್ಘಾಟಿಸಲಾಗುವುದು. ನಂತರ ರೈತಗೀತೆಯನ್ನು ಹಾಡಲಾಗುವುದು. ಸಮಾರಂಭಕ್ಕೆ ರೈತಪರ ಹೋರಾಟಗಾರರು, ರೈತಪರ ಎಲ್ಲ ಸಂಘಟನೆಗಳು ಆಗಮಿಸಬೇಕು. ರೈತಪರ ಹೋರಾಟಕ್ಕೆ ನಮ್ಮ ಒಕ್ಕೂಟವೂ ಸಾಥ್ ನೀಡಲಿದೆ. ಕೊಪ್ಪ ಹಾಗೂ ಎನ್.ಆರ್.ಪುರದ ಒಕ್ಕೂಟದ ಕಚೇರಿಗಳನ್ನು ಒಂದೇ ಸಮಾರಂಭದಲ್ಲಿ ಒಟ್ಟಿಗೆ ಉದ್ಘಾಟಿಸಲಾಗುವುದು. ಎನ್.ಆರ್.ಪುರ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು ಸೇರಿದಂತೆ ಖಾಂಡ್ಯ ಹೋಬಳಿಯ ವ್ಯಾಪ್ತಿಯಲ್ಲಿ ಒಕ್ಕೂಟ ಕಾರ್ಯನಿರ್ವಹಿಸುತ್ತದೆ. ರೈತರು ಆನ್‌ಲೈನ್ ಮೂಲಕ ಅರ್ಜಿ ಹಾಕುವ ಮೊಬೈಲ್ ಆ್ಯಪ್ ಹಾಗೂ ವೆಬ್‌ಸೈಟ್‌ನ್ನೂ ಅಂದು ಅನಾವರಣಗೊಳಿಸಲಾಗುವುದು ಎಂದರು.
ರೈತರ ಮರಣಶಾಸನ ಬರೆಯುವಂತಹ ಸೆಕ್ಷನ್ 4, ಡೀಮ್ಡ್ ಾರೆಸ್ಟ್, ಹುಲಿ ಯೋಜನೆಯಂತಹ ಯೋಜನೆಗಳ ವಿರುದ್ಧ ಹೋರಾಟದ ಮೂಲಕ ಸಮರ ಸಾರಲಿದೆ ಎಂದರು. ಒಕ್ಕೂಟದ ಪದಾಧಿಕಾರಿಗಳಾದ ಗದ್ದೇಮನೆ ಸತೀಶ್, ಸಚಿನ್, ಹಂಚಿನಮನೆ ರಾಘವೇಂದ್ರ, ವಿಕಾಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net