ಶ್ರೀ ಸೀತಾರಾಮ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ

ನಿಡಘಟ್ಟ ಶ್ರೀ ಸೀತಾರಾಮ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ನಿಡಘಟ್ಟ ಶ್ರೀ ಸೀತಾರಾಮ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
Published on
ಕಡೂರು: ನಿಡಘಟ್ಟ ಗ್ರಾಮದ ಶ್ರೀ ಸೀತಾರಾಮ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ರಾಮನವಮಿಯಂದು ಆರಂಭವಾದ ಜಾತ್ರಮಹೋತ್ಸವ ಕಳೆದ ಮಾ.28ರಂದು ಶ್ರೀ ಸ್ವಾಮಿಯವರಿಗೆ ಪಂಚಾಮೃತಾಭಿಷೇಕ, ಪುಣ್ಯಾಹ ದೇವತಾ ಪ್ರಾರ್ಥನೆ, ಮೃತ್ತಿಕ ಸಂಗ್ರಹಣೆ ಅಂಕುರಾರ್ಪಣೆ ನಡೆದವು. 30ರ ಬೆಳಗ್ಗೆ ಸಂಪೋತ್ಸವ, ಸಂಜೆ ನಿತ್ಯ ಹೋಮಗಳು ಬಲಿ, ಗರುಡೋತ್ಸವ, ಚಂದ್ರಮಂಡಲೋತ್ಸವ ನಡೆಯಿತು. ಮಂಗಳವಾರ ಬೆಳಗ್ಗೆ 9ಕ್ಕೆ ಸೀತಾರಾಮ ಕಲ್ಯಾಣೋತ್ಸವ ಮಧ್ಯಾಹ್ನ ಶ್ರೀಕೃಷ್ಣ ಗಮದೋತ್ಸನ ನಡೆಯಿತು. ಸಂಜೆ 5.30ಕ್ಕೆ ಶ್ರೀ ಸ್ವಾಮಿಯನ್ನು ನೂತನ ರಥೋತ್ಸವಕ್ಕೆ ಕೂರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಥವನ್ನು ದೇವಾಲಯದ ಆವರಣದಿಂದ ಬೀರದೇವರ ಗುಡಿಯವರೆಗೆ ಎಳೆದು ಏ.1ರಂದು ಮತ್ತೆ ವಾಪಸ್ ದೇವಾಲಯಕ್ಕೆ ರಥವನ್ನು ತರಲಾಗುವುದು. ಆಗಮಿಕರಾದ ರಾಮಪ್ರಸಾದ್, ಅರ್ಚಕ ತಮ್ಮಯ್ಯ, ಕನ್ವೀನಿಯರ್ ಚಿದಾನಂದ್, ದೇವಾಲಯ ಕಮಿಟಿ ಅಧ್ಯಕ್ಷ ಎನ್.ಪಿ.ಕೃಷ್ಣಮೂರ್ತಿ, ಸದಸ್ಯರಾದ ನಿಂಗಪ್ಪ, ಉದಯಕುಮಾರ್, ಬಸವರಾಜು, ನಾಗರಾಜು, ನೀಲಕಂಠಪ್ಪ, ನಂಜುಂಡಪ್ಪ, ಸುರೇಶ್, ಸಿದ್ದರಾಮಪ್ಪ, ಜಯಣ್ಣ, ರವಿಗೌಡ್ರು, ಗೋವಿಂದಪ್ಪ, ಹೇಮರಾಜು, ಲೋಕೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net