ಶ್ರೀ ಪಾರ್ಶ್ವನಾಥ ಸ್ವಾಮಿ ಜೋಡಿ ಪಲ್ಲಕ್ಕಿ ಉತ್ಸವ

ಕೆಳಂಗಡಿ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಶ್ರೀ ಚಂದ್ರನಾಥ ಸ್ವಾಮಿ ಮತ್ತು ಶ್ರೀ ಪಾರ್ಶ್ವನಾಥ ಸ್ವಾಮಿಯ  ವಾರ್ಷಿಕ ಪೂಜಾ ಮಹೋತ್ಸವ ನಡೆಯಿತು.
ಕೆಳಂಗಡಿ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಶ್ರೀ ಚಂದ್ರನಾಥ ಸ್ವಾಮಿ ಮತ್ತು ಶ್ರೀ ಪಾರ್ಶ್ವನಾಥ ಸ್ವಾಮಿಯ ವಾರ್ಷಿಕ ಪೂಜಾ ಮಹೋತ್ಸವ ನಡೆಯಿತು.
Published on
ಕಳಸ: ತಾಲೂಕಿನ ಕೆಳಂಗಡಿ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಶ್ರೀ ಚಂದ್ರನಾಥ ಸ್ವಾಮಿ ಮತ್ತು ಶ್ರೀ ಪಾರ್ಶ್ವನಾಥ ಸ್ವಾಮಿಯ ವಾರ್ಷಿಕ ಪೂಜಾ ಮಹೋತ್ಸವ ಸಡಗರದಿಂದ ನಡೆಯಿತು. 
ಚಂದ್ರನಾಥ ಸ್ವಾಮಿ ಸನ್ನಿಧಿಯಲ್ಲಿ ವಿಮಾನಶುದ್ಧಿ 108 ಕಲಶ ಮಹಾಭಿಷೇಕ, ಮೃತ್ಯುಂಜಯ ಆರಾಧನೆ, ಆಶ್ಲೇಷ ಬಲಿ, ಜ್ವಾಲಾಮಾಲಿನಿ ಆರಾಧನೆ, ಕ್ಷೇತ್ರಪಾಲ ಆರಾಧನೆ ನಡೆಯಿತು.
ಶ್ರೀ ಪಾರ್ಶ್ವನಾಥ ಸ್ವಾಮಿ ಸನ್ನಿಧಿಯಲ್ಲಿ ವಿಮಾನಶುದ್ಧಿ 24 ಕಲಶ ಮಹಾಭಿಷೇಕ, ಕಲಿಕುಂಡ ಯಂತ್ರಾರಾಧನೆ, ಶ್ರೀ ಪದ್ಮಾವತಿ ದೇವಿ ಆರಾಧನೆ ಜರುಗಿತು. ಸಂಜೆ ಜೋಡಿ ಪಲ್ಲಕಿ ಉತ್ಸವ, ಧರ್ಮ ದೇವತೆಗಳ ಸನ್ನಿಧಿಯಲ್ಲಿ ಗಗರ ಸೇವೆ ನಡೆಯಿತು.
ವಾರ್ಷಿಕ ಪೂಜಾ ಮಹೋತ್ಸವ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ 9 ವರ್ಷಗಳಿಂದ ಚಂದ್ರನಾಥ ಸ್ವಾಮಿ ಬಸದಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ 10 ಕೋಟಿ ರೂ.ಗೂ ಅಧಿಕ ವೆಚ್ಚದ ಶಿಲಾಮಯ ಬಸದಿಯ ನಿರ್ಮಾಣಕ್ಕೆ ಕಾರಣರಾದ ಕೆ.ಸಿ.ಧರಣೇಂದ್ರಯ್ಯ ಅವರಿಗೆ ಸರ್ವೋದಯ ಜೈನ ತೀರ್ಥ ಸಮಿತಿಯಿಂದ ‘ಧರ್ಮ ರತ್ನಾಕರ’ ಬಿರುದು ನೀಡಿ ಗೌರವಿಸಲಾಯಿತು.
ವೇಗದ ನಡಿಗೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ವಿಧುಷಾ ಜೈನ್ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜೈನ ಸಮುದಾಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸರ್ವೋದಯ ತೀರ್ಥ ಸಮಿತಿ ಅಧ್ಯಕ್ಷ ಭೋಜರಾಜ್ ಬರ್ಗಲ್, ಉಪಾಧ್ಯಕ್ಷ ಅನಿಲ್‌ಕುಮಾರ್, ಕಾರ್ಯದರ್ಶಿ ವಿನಯ್, ಸಹ ಕಾರ್ಯದರ್ಶಿ ಅನಿಲ್, ಖಜಾಂಚಿ ಧರಣೇಂದ್ರ ಹೆಬ್ಳೂರು, ಕೆ.ಸಿ.ವಿಜಯಕುಮಾರ್, ಸುರೇಶ್‌ಕುಮಾರ್, ಹರ್ಷೇಂದ್ರ, ಸುದರ್ಶನ್, ಪ್ರಸಿದ್ಧ ಜೈನ್, ಅಜಿತ್‌ಕುಮಾರ್, ಜಿತೇಂದ್ರ, ಸುಜಿತ್ ಬರ್ಗಲ್, ಭರತ್‌ರಾಜ್, ಅಜಿತಪ್ರಸಾದ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net