ಭಾನುವಾರ ಬೆಳಗ್ಗೆಯಿಂದ ಸಂಜೆಯವರೆಗೆ ವಿಪ್ರಬಂಧುಗಳಿಂದ ಲಕ್ಷ ಗಾಯತ್ರಿ ಜಪ ನಡೆಯಿತು. ಸಂಜೆ ಅಗ್ರಹಾರದ ಮಹಿಳೆಯರಿಂದ ಶ್ರೀ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ನಡೆಯಿತು. ಸೋಮವಾರ ಬೆಳಗ್ಗೆ ಶಾಕಲ ಋಗ್ವೇದ ಸಂಹಿತಾ ಪಾರಾಯಣ ನಡೆಯಿತು. ನಂತರ ಗಾಯತ್ರಿ ದೇವಿಗೆ ಅಭಿಮಂತ್ರಿತ ಕಲಶಾಭಿಷೇಕ, ಮಧ್ಯಾಹ್ನ ಶ್ರೀ ಗಾಯತ್ರಿ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ಜರುಗಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು.