ವರ್ಧಂತ್ಯುತ್ಸವ ಅಂಗವಾಗಿ ಬೆಳಗ್ಗೆ 8.30 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಯಿತು. ದೇವಿಗೆ ಅಭಿಷೇಕ, ಶ್ರೀಮಹಾಗಣಪತಿ ಹೋಮ, ಶ್ರೀ ಚಂಡಿಕಾ ಹೋಮ, ಶ್ರೀ ಲಲಿತಾ ಹೋಮ, ಶ್ರೀಲಕ್ಷ್ಮೀನಾರಾಯಣ ಹೃದಯ ಹೋಮ, ಶ್ರೀರಾಮತಾರಕ ಹೋಮ, ಶ್ರೀ ಬಾಲತ್ರಿಪುರ ಸುಂದರಿ ಹೋಮ, ಶ್ರೀಗಾಯತ್ರಿ ಹೋಮ, ಶ್ರೀನವಗ್ರಹ ಹೋಮ, ಶ್ರೀರುದ್ರಹೋಮ ಹಾಗೂ ಶ್ರೀಅನ್ನಪೂರ್ಣ ಮೂಲಮಂತ್ರ ಹೋಮಗಳು ಜರುಗಲಿವೆ. ಹೋಮಗಳ ಜತೆಗೆ ವೇದ ಪಾರಾಯಣಗಳೂ ಸಂಪನ್ನಗೊಂಡವು.