ಅತಿ ವೇಗದ ಚಾಲನೆ ಅಪಾಯಕ್ಕೆ ಅಹ್ವಾನ

ಶೃಂಗೇರಿಯಲ್ಲಿ ಆಯೋಜಿಸಿದ್ದ  ರಸ್ತೆ ಸುರಕ್ಷತಾ ಕಾರ್ಯಾಗಾರದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಅಂಬಲಮನೆ ಸುಬ್ರಮಣ್ಯ  ಮಾತನಾಡಿದರು. ಶಿವಕುಮಾರ್ ,ಕೆ.ಎಲ್.ಗೋಪಾಲಕಷ್ಣ,ತೇಜಸ್ವಿನಿ,ಮಾನಸ ಇದ್ದರು.
ಶೃಂಗೇರಿಯಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಕಾರ್ಯಾಗಾರದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಅಂಬಲಮನೆ ಸುಬ್ರಮಣ್ಯ ಮಾತನಾಡಿದರು. ಶಿವಕುಮಾರ್ ,ಕೆ.ಎಲ್.ಗೋಪಾಲಕಷ್ಣ,ತೇಜಸ್ವಿನಿ,ಮಾನಸ ಇದ್ದರು.
Published on
ಶೃಂಗೇರಿ: ಯುವಕರು ಮೋಜು ಮಸ್ತಿಗಾಗಿ ಅತಿಯಾದ ವೇಗದಲ್ಲಿ ಬೈಕ್ ಚಾಲನೆ ಮಾಡುವುದು ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತದೆ ಎಂದು ಶೃಂಗೇರಿ ಪೊಲೀಸ್ ಠಾಣೆ ಸಿಬ್ಬಂದಿ ಪ್ರದೀಪ್ ಹೇಳಿದರು.
ಜೆಸಿಬಿಎಂ ಕಾಲೇಜು ಹಾಗೂ ರೋಟರಿ ಸಂಸ್ಥೆ ಆಶ್ರಯದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಯಾವುದೇ ವಾಹನ ಚಾಲನೆ ಮಾಡುವ ಮುನ್ನ ಚಾಲನಾ ಪರವಾನಗಿ ಹೊಂದಿರಬೇಕು. ಚಾಲನಾ ಪರವಾನಗಿಯೊಂದಿಗೆ ವಿಮೆ, ಹೊಗೆ ತಪಾಸಣೆ ವರದಿಯು ಕಡ್ಡಾಯವಾಗಿರಬೇಕು. ವಾಹನ ಸೂಕ್ತ ದಾಖಲೆಗಳನ್ನು ಹೊಂದಿರಬೇಕು. ಕಾನೂನಿನಲ್ಲಿ ವಾಹನ ಓಡಿಸಲು ರಸ್ತೆ ಸ್ಥಳಕ್ಕೆ ಸರಿಯಾಗಿ ವೇಗದ ಮಿತಿ ಇರುತ್ತದೆ. ಅದನ್ನುಮೀರಿದರೆ ಕಾನೂನಿನಲ್ಲಿ ದಂಡ ವಿಧಿಸಲು ಅವಕಾಶ ಇರುತ್ತದೆ. ದ್ವಿಚಕ್ರ ವಾಹನದಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಪ್ರಯಾಣಿಸುವುದು ಕಾನೂನಿನ ಪ್ರಕಾರ ಅಪರಾಧ, ವಾಹನ ನಿಲುಗಡೆ ಸ್ಥಳವೂ ಸಹ ನಿಗದಿತ ಸ್ಥಳದಲ್ಲಿಯೇ ನಿಲುಗಡೆ ಮಾಡಬೇಕು. ರಸ್ತೆ ಸಾರಿಗೆ ಪ್ರಾಧಿಕಾರದ ನಿಯಮಗಳಂತೆ ಇರುವ ಕಾನೂನುಗಳನ್ನು ಪಾಲಿಸಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಅಂಬಲಮನೆ ಸುಬ್ರಹ್ಮಣ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕರು ವಾಹನ ಚಾಲನೆ ಮಾಡುತ್ತಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿದ್ದು, ನ್ಯಾಯಾಲಯವು ಪಾಲಕರಿಗೆ ದಂಡ ವಿಧಿಸುತ್ತಿದೆ. ವಿದ್ಯಾರ್ಥಿಗಳು ವೇಗವಾಗಿ ವಾಹನ ಚಾಲನೆ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಪ್ರಭಾರಿ ಪ್ರಾಚಾರ್ಯ ಯೋಗೀಶ್ ಕುಮಾರ್ ಮಾತನಾಡಿ, ಅತಿ ವೇಗ ಅಪಾಯ ತಂದು ಕೊಡುವ ಸಾಧ್ಯತೆ ಹೆಚ್ಚಿರುತ್ತದೆ. ಜೀವ ಅಮೂಲ್ಯವಾಗಿದ್ದು, ಅಪಘಾತ ಉಂಟಾದಲ್ಲಿ ತೀವ್ರ ಪೆಟ್ಟು ಅಥವಾ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಕಾನೂನಿನಲ್ಲಿ ಸೂಚಿಸಿದಂತೆ ವಾಹನ ಚಾಲನೆ ಮಾಡಬೇಕು ಎಂದರು. ಎ.ಜಿ.ಪ್ರಶಾಂತ್, ಡಾ.ವಸಂತ ಚೌಹಾಣ್, ಯುವ ರೆಡ್ ಕ್ರಾಸ್ ಘಟಕದ ಜಿ.ಎಸ್.ಸಂದೇಶ್, ರೋವರ್ಸ್‌ ಮತ್ತು ರೇಂಜರ್ಸ್‌ ಘಟಕದ ಶಿವಕುಮಾರ್, ಕೆ.ಎಲ್.ಗೋಪಾಲಕೃಷ್ಣ ವಿದ್ಯಾರ್ಥಿಗಳಾದ ತೇಜಸ್ವಿನಿ, ಮಾನಸ, ಶ್ರೀ ದೇವಿ ಮತ್ತು ಸಾಹಿತ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net