ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿವಿಧ ಪಕ್ಷಗಳ ಮತಗಟ್ಟೆ ಏಜೆಂಟ್‌ಗಳ ಸಭೆಯಲ್ಲಿ ಮಾತನಾಡಿ, ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 109, ಚಿಕ್ಕಮಗಳೂರು ತಾಲೂಕಿನ 4 ಹೋಬಳಿಗಳಲ್ಲಿ 89, ಕಳಸ ತಾಲೂಕಿನಲ್ಲಿ 33 ಮತಗಟ್ಟೆ ಕೇಂದ್ರವಿದೆ. ಮೂಡಿಗೆರೆ 77,062, ಚಿಕ್ಕಮಗಳೂರು ತಾಲೂಕಿನ 4 ಹೋಬಳಿಯಲ್ಲಿ 65,510, ಕಳಸ 24,727, ಸಂಪರ್ಕಕ್ಕೆ ಸಿಗದ 465 ಮತದಾರರು ಸೇರಿದಂತೆ ಒಟ್ಟು 1,67,299 ಮತದಾರರಿದ್ದಾರೆ. ಅದರ ಪೈಕಿ 1,63,296 ಮ್ಯಾಪಿಂಗ್ ಅರ್ಜಿ ವಿತರಣೆಯಾಗಿದೆ. ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಕರು, ಎಸ್‌ಐಆರ್ ನೋಡಲ್ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ 59,936 ಅರ್ಜಿಗಳನ್ನು ಪಡೆದ ಬಳಿಕ ಅದನ್ನು ಪರಿಶೀಲಿಸಿ ಗಣಕೀಕರಣಗೊಳಿಸಿದ್ದಾರೆ ಎಂದು ಮಾಹಿತಿ ನೀಡಿದರು.