ಸರ್ವರ ಒಳಿತಿಗೆ ಶಿವಜ್ಯೋತಿ-ಶ್ರಾವಣೋತ್ಸವ ಕಾರ್ಯಕ್ರಮ

ಲಿಂಗದಹಳ್ಳಿಯಲ್ಲಿ ಆಯೋಜಿಸಿರುವ ಶಿವಜ್ಯೋತಿ-ಶ್ರಾವಣೋತ್ಸವ ಸಮಾರಂಭದಲ್ಲಿ ಭಾಗವಹಿಸಿರುವ ಬಸವ ಭಕ್ತರು.
ಲಿಂಗದಹಳ್ಳಿಯಲ್ಲಿ ಆಯೋಜಿಸಿರುವ ಶಿವಜ್ಯೋತಿ-ಶ್ರಾವಣೋತ್ಸವ ಸಮಾರಂಭದಲ್ಲಿ ಭಾಗವಹಿಸಿರುವ ಬಸವ ಭಕ್ತರು.
Published on
ತರೀಕೆರೆ: ಲಿಂಗದಹಳ್ಳಿಯಲ್ಲಿ ಸಾಣೇಹಳ್ಳಿ ಡಾ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಆರಂಭವಾದ ಶಿವಜ್ಯೋತಿ-ಶ್ರಾವಣೋತ್ಸವ ಭಕ್ತಿಭಾವ ಸಮಾರಂಭಕ್ಕೆ ಪಟ್ಟಣದ ಅಕ್ಕ ನಾಗಲಾಂಬಿಕೆ ಗದ್ದುಗೆಯಿಂದ ಜ್ಯೋತಿ ಹೊತ್ತಿಸಿ ತರುವ ಮೂಲಕ ಚಾಲನೆ ನೀಡಲಾಗಿದೆ.
ಪ್ರತಿದಿನ ಸಂಜೆ ಹಾದಿಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿ, ಲಿಂಗದಹಳ್ಳಿ ಇನ್ನಿತರ ಕಡೆಯಿಂದ ಆಗಮಿಸುವ ಬಸವ ಭಕ್ತರು ಶಿವ ಶರಣರ ವಚನಗಳ ಪಠಣ ಮಾಡುವ ಜತೆಗೆ ಶರಣರ ಜೀವನ ಚರಿತ್ರೆ ಪರಿಚಯಿಸಿ ಪ್ರವಚನ, ವಚನ ಗಾಯನ, ಸಾಮೂಹಿಕ ಪ್ರಾರ್ಥನೆ ಜತೆ ಅನುಭಾವ ಗೋಷ್ಟಿ ಆಯೋಜಿಸಿ ಶರಣರ ತತ್ವ, ಬಸವ ಸಂಸ್ಕೃತಿ, ಶಿವಚಿಂತನೆ, ಶಿವಜ್ಞಾನ, ಶಿವಾನುಭವದ ಸಂದೇಶ ಜನರಿಗೆ ಸಾರುವ ಕೆಲಸ ಮಾಡುತ್ತಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಗಂಗಾಧರ ಮಾತನಾಡಿ, ನಾಡಿನಲ್ಲಿ ಮಳೆ-ಬೆಳೆ, ಸಮೃದ್ಧಿಯೊಂದಿಗೆ ಸರ್ವರಿಗೂ ಒಳಿತಾಗಲಿ ಎಂಬ ಪವಿತ್ರ ಸಂಕಲ್ಪದಿಂದ ಶಿವಜ್ಯೋತಿ-ಶ್ರಾವಣೋತ್ಸವ ಸಮಾರಂಭ ಆಯೋಜಿಸಲಾಗಿದೆ. ಅಕ್ಕನಾಗಲಾಂಬಿಕೆ ಗದ್ದುಗೆಯಿಂದ ಹೊತ್ತಿಸಿ ತಂದ ಜ್ಯೋತಿ ಲಿಂಗದಹಳ್ಳಿ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಸೆ.10ರವರೆಗೆ ಉರಿಯಲಿದೆ ಎಂದು ಮಾಹಿತಿ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷೆ ಪುಷ್ಪಾ, ತಾಲೂಕು ಅಧ್ಯಕ್ಷ ಚಂದ್ರಶೇಖರ್, ರಾಷ್ಟ್ರೀಯ ಬಸವದಳದ ಸದಸ್ಯರಾದ ಸುನೀತಾ, ಜ್ಯೋತಿ, ಸದಾನಂದ, ವಿಜಯ, ಮಂಗಳ, ಮಮತಾ, ರಮೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net