

ಪ್ರಮುಖ ಮುಖ್ಯಾಂಶಗಳು
ಕೊಪ್ಪ: ಪಟ್ಟಣ ಮೇಲಿನಪೇಟೆಯಲ್ಲಿ ಗುರುತಿಸಲಾದ ಸ್ಥಳದಲ್ಲಿ ಲಭ್ಯವಿದ್ದ 83 ನಿವೇಶನಗಳಿಗೆ ಲಾನುಭವಿಗಳ ಆಯ್ಕೆ ಪಟ್ಟಿ ಅಂತಿಮಗೊಳಿಸಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಮಂಗಳವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮೂರು ಬಾರಿ ಪರಿಶೀಲನೆ ಮಾಡಿ ಲಾನುಭವಿಗಳ ಆಯ್ಕೆ ಮಾಡಲಾಗಿದೆ ಎಂದರು.
ಈಗ ಲಭ್ಯವಿದ್ದ 83 ನಿವೇಶನಗಳಿಗೆ ಈ ಸಭೆಯಲ್ಲಿ 49 ಲಾನುಭವಿಗಳ ಆಯ್ಕೆ ಮಾಡಲಾಗಿದೆ. ಈ ಹಿಂದಿನ ಸಭೆಯಲ್ಲಿ 34 ಮಂದಿ ಆಯ್ಕೆಯಾಗಿದ್ದರು. ಈ ಪೈಕಿ 16 ಲಾನುಭವಿಗಳನ್ನು ಈ ಸಭೆಯಲ್ಲಿ ಅಂತಿಮವಾಗಿ ಖಚಿತಪಡಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳ ಪೈಕಿ 21 ಅರ್ಜಿ ತಿರಸ್ಕೃತಗೊಂಡಿವೆ. ಉಳಿದ 18 ಮಂದಿ ಲಾನುಭವಿಗಳಿಗೆ ಮುಂದಿನ ದಿನಗಳಲ್ಲಿ ಆಯ್ಕೆ ಮಾಡಿ ಹಕ್ಕುಪತ್ರ ಕೊಡುವ ಕೆಲಸ ಮಾಡುತ್ತೇವೆ ಎಂದರು.
22 ವರ್ಷಗಳಿಂದ ನಿವೇಶನ ವಿತರಿಸಲು ಸಾಧ್ಯವಾಗಿರಲಿಲ್ಲ. ಬಡವರಿಗೆ ನಿವೇಶನ ಕೊಡಲು ಸದ್ಯ ಕಾಂಗ್ರೆಸ್ ಸರ್ಕಾರದ ಮೂಲಕ ಸಾಧ್ಯವಾಗಿದೆ. ಸಭೆಯಲ್ಲಿ ಆಯ್ಕೆಗೊಂಡ ಲಾನುಭವಿಗಳ ಹೆಸರು ಸೂಚನಾ ಲಕದಲ್ಲಿ ಪ್ರಕಟಿಸಲಾಗುತ್ತದೆ. ತಹಸೀಲ್ದಾರ್, ಆಶ್ರಯ ಸಮಿತಿ ಸದಸ್ಯರು, ಮುಖ್ಯಾಧಿಕಾರಿ, ಲಾನುಭವಿಗಳ ಸಮಾಕ್ಷಮ ಲಾಟರಿ ಮೂಲಕ ನಿವೇಶನ ನಂಬರ್ ಹಾಕಿ ಆಯ್ಕೆ ಮಾಡಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಲಾನುಭವಿಗಳ ಹೆಸರು ಕಳುಹಿಸಿಕೊಟ್ಟು ಹಕ್ಕುಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಲಿಖಿತಾ ಮೋಹನ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಕೋಸ್, ಆಶ್ರಯ ಸಮಿತಿ ಸದಸ್ಯರಾದ ಜವುರ್ ಹುಸೇನ್, ಸತೀಶ್ ಸೀನಭಂಡಾರಿ, ಭಾರತಿ ಶಂಕರ್, ತುಳಸಮ್ಮ ಗದಿಗಪ್ಪ ಇದ್ದರು.