ಶಿಕ್ಷಣ ಕ್ಷೇತ್ರಕ್ಕೆ ಶಾರದಾಪೀಠ ಕೊಡುಗೆ ಅನನ್ಯ (srigeri)

ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವಿಭಾಗಕ್ಕೆ ಶ್ರೀಮಠದಿಂದ ನೀಡಿದ ಕಂಪ್ಯೂಟರ್ ಮತ್ತು ಪ್ರೊಜೆಕ್ಟರ್ ಹಸ್ತಾಂತರ ಕಾರ್ಯಕ್ರಮವನ್ನು ರಾಮಕೃಷ್ಣ ಉದ್ಘಾಟಿಸಿದರು. ವಿಘ್ನೇಶ್, ಡಾ. ಶಿವಕುಮಾರ್, ಆಶಾಲತಾ, ಸರಸ್ವತಿ ಇತರರಿದ್ದರು.
ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವಿಭಾಗಕ್ಕೆ ಶ್ರೀಮಠದಿಂದ ನೀಡಿದ ಕಂಪ್ಯೂಟರ್ ಮತ್ತು ಪ್ರೊಜೆಕ್ಟರ್ ಹಸ್ತಾಂತರ ಕಾರ್ಯಕ್ರಮವನ್ನು ರಾಮಕೃಷ್ಣ ಉದ್ಘಾಟಿಸಿದರು. ವಿಘ್ನೇಶ್, ಡಾ. ಶಿವಕುಮಾರ್, ಆಶಾಲತಾ, ಸರಸ್ವತಿ ಇತರರಿದ್ದರು.
Published on
ಶೃಂಗೇರಿ: ಸಾಂಸ್ಕೃತಿಕ, ಸಾಮಾಜಿಕ, ಆಧ್ಯಾತ್ಮಿಕ ಕ್ಷೇತ್ರಗಳಿಗೆ ಶೃಂಗೇರಿ ಶಾರದಾಪೀಠ ನೀಡಿದ ಕೊಡುಗೆ ಅನನ್ಯ. ಪ್ರತಿನಿತ್ಯ 22 ಸಾವಿರ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಅನ್ನಪ್ರಸಾದವನ್ನು ನೀಡುತ್ತಿದ್ದು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡುತ್ತ ಬಂದಿದೆ ಎಂದು ಮಠದ ಹಣಕಾಸು ಮತ್ತು ಲೆಕ್ಕ ಖಾತೆಗಳ ವ್ಯವಸ್ಥಾಪಕ ಸತೀಶ್ ತಿಳಿಸಿದರು.
 ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವಿಭಾಗಕ್ಕೆ ಬುಧವಾರ ಶ್ರೀಮಠದಿಂದ ನೀಡಿದ 3.5 ಲಕ್ಷ ರೂ. ಮೊತ್ತದ ಕಂಪ್ಯೂಟರ್ ಮತ್ತು ಪ್ರೊಜೆಕ್ಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಗದ್ಗುರು ಶ್ರೀ ಚಂದ್ರಶೇಖರಭಾರತೀ ಸ್ವಾಮೀಜಿ ಅವರು ಶಿಕ್ಷಣ ಪಡೆದ ಸರ್ಕಾರಿ ಶಾಲೆ ಸೇರಿದಂತೆ ಹಲವಾರು ಸರ್ಕಾರಿ ಶಾಲೆಗಳಿಗೆ ವಿಶೇಷ ಅನುದಾನವನ್ನು ಆದ್ಯತೆ ಮೇರೆಗೆ ನೀಡುತ್ತ ಬಂದಿರುವ ಶ್ರೀಮಠವು ಗ್ರಾಮೀಣ ಭಾಗದ ದೇವಾಲಯಗಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ನಿರಂತರ ಸಹಕಾರ ನೀಡುತ್ತಿದೆ. ಅದನ್ನು ಸಮರ್ಪಕವಾಗಿ ಸರ್ವರೂ ಬಳಸಿಕೊಳ್ಳಬೇಕು ಎಂದರು.
ಕಾಲೇಜು ಸಮಿತಿ ಕಾರ್ಯಾಧ್ಯಕ್ಷ ತ್ರಿಮೂರ್ತಿ ಹೊಸ್ತೋಟ ಮಾತನಾಡಿ, ನಾವು ಸಿಎಸ್‌ಆರ್ ಂಡ್‌ನಿಂದ ನೆರವು ಕೋರಿದ್ದೆವು. ಅದು ಬರುವುದು ಕೊಂಚ ತಡವಾಗುತ್ತದೆ. ಹಾಗಾಗಿ ಶ್ರೀಮಠಕ್ಕೆ ಮನವಿ ಮಾಡಿಕೊಂಡಾಗ ಅವರು ತಕ್ಷಣ ಸ್ಪಂದಿಸಿ ಸಹಕಾರ ನೀಡಿದ್ದಾರೆ. ಪ್ರತಿ ವರ್ಷ ಕಾಲೇಜಿನ ಎನ್‌ಎಸ್‌ಎಸ್ ಶಿಬಿರಕ್ಕೂ ಸಹಕಾರ ನೀಡುತ್ತ ಬಂದಿದ್ದು, ಸರ್ಕಾರಿ ಕಾಲೇಜಿನ ಕುರಿತು ಅವರಿಗಿರುವ ಕಾಳಜಿ ಸರ್ವರಿಗೂ ಮಾದರಿ. ನಮ್ಮ ಕಾಲೇಜಿಗೆ ಜಗದ್ಗುರುಗಳ ಅನುಗ್ರಹ ಸದಾ ಇರಲಿ ಎಂದರು.
ಕಾಲೇಜಿನ ಪ್ರಾಚಾರ್ಯೆ ಆಶಾಲತಾ, ಕಾಲೇಜು ಸಮಿತಿಯ ನಾಗರಾಜ್, ಕೌಸ್ತುಭ ಭಟ್, ಬಿಸಿಎ ವಿಭಾಗದ ಸಂಚಾಲಕ ರವಿಶಂಕರ್, ಉಪನ್ಯಾಸಕರಾದ ಮರಿಸ್ವಾಮಿ, ಚೇತನ್, ಸರಸ್ವತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net