ಎನ್.ಆರ್.ಪುರ: ಮಹಿಳೆಯರು ಸ್ವಉದ್ಯೋಗದಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂದು ಮಿಸ್ ಬ್ಯುಸಿನೆಸ್ ಗ್ಲೋಬಲ್ ಇಂಡಿಯಾ ರನ್ನರ್ ಅಪ್ ದ್ವಾರಮಕ್ಕಿ ಸನ್ಮತಿ ರಕ್ಷಿತ್ ತಿಳಿಸಿದರು.
ಜನಸ್ಪಂದನ ಮಹಿಳಾ ಸಮಾಜದ ಕಚೇರಿಯಲ್ಲಿ ಮಹಿಳೆಯರಿಗೆ ಎರಡು ಹೊಲಿಗೆ ಯಂತ್ರ ಉಚಿತವಾಗಿ ಕೊಡುಗೆ ನೀಡಿ ಮಾತನಾಡಿದರು. ಮಹಿಳೆಯರು ಸಮಾಜದಲ್ಲಿ ಸೌಂದರ್ಯ ಸ್ಪರ್ಧೆಯಲ್ಲೂ ಪ್ರತಿನಿಧಿಸಬಹುದು. ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ ಎಂದರು.
ಜನಸ್ಪಂದನ ಮಹಿಳಾ ಸಮಾಜದ ಅಧ್ಯಕ್ಷೆ ಜುಬೇದಾ ಮಾತನಾಡಿ, ಮಹಿಳೆಯರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರು.
ಜನಸ್ಪಂದನ ಮಹಿಳಾ ಸಮಾಜದಿಂದ ಮಹಿಳೆಯರಿಗೆ ಬ್ಯೂಟಿಷಿಯನ್ ಕೋರ್ಸ್‌ಗಳ ಮಾಹಿತಿ ನೀಡಲಾಯಿತು. ಬಿಇಒ ಶಬಾನ ಅಂಜುಮ್, ಜನಸ್ಪಂದನ ಮಹಿಳಾ ಸಮಾಜದ ಕಾರ್ಯದರ್ಶಿ ಶ್ರುತಿ, ಶಿವರತ್ನಾ, ಭಾನು, ಸಂಧ್ಯಾ, ಸುನೀತಾ, ಅನಿತಾ, ವಿದ್ಯಾ ಇತರರಿದ್ದರು.