ದೇವಸ್ಥಾನದ ಜಾಗ ಉಳಿಸಿ

 ಸಖರಾಯಪಟ್ಟಣದ ಬಿಡದಿಮನೆ ಆವರಣದಲ್ಲಿರುವ ದೇವಾಲಯದ ಜಾಗದ ಕುರಿತು ಸ್ಥಳೀಯರ ಜತೆ ಕಡೂರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಚರ್ಚಿಸಿದರು. ಜಿತೇಂದ್ರ, ನಾಯಕ್ ಸಚ್ಚಿದಾನಂದ, ದಿವಾಕರ ಇತರರಿದ್ದರು.
ಸಖರಾಯಪಟ್ಟಣದ ಬಿಡದಿಮನೆ ಆವರಣದಲ್ಲಿರುವ ದೇವಾಲಯದ ಜಾಗದ ಕುರಿತು ಸ್ಥಳೀಯರ ಜತೆ ಕಡೂರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಚರ್ಚಿಸಿದರು. ಜಿತೇಂದ್ರ, ನಾಯಕ್ ಸಚ್ಚಿದಾನಂದ, ದಿವಾಕರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಡದಿಮನೆ
  • ಸ್ವಂತ ಕೆಲಸಗಳಿಗೆ
ಕಡೂರು: ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯದ ಬಿಡದಿಮನೆ ಆವರಣದ ಜಾಗವನ್ನು ಉಳಿಸಿಕೊಡುವಂತೆ  ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರನ್ನು ಗ್ರಾಮಸ್ಥರು ಒತ್ತಾಯಿಸಿದರು.
ಬಿಡದಿಮನೆ ಆವರಣದ ಮುಂಭಾಗದಲ್ಲಿದ್ದ ದೇವಾಲಯದ ಜಾಗವನ್ನು ಸ್ವಂತ ಕೆಲಸಗಳಿಗೆ, ವಾಹನ ನಿಲುಗಡೆಗೆ ಬಳಸಿಕೊಳ್ಳುತ್ತಿದ್ದರು. ಇದನ್ನು ತಪ್ಪಿಸಲು ಗ್ರಾಮಸ್ಥರು ದೇವಾಲಯದ ಜಾಗಕ್ಕೆ ಬೇಲಿ ನಿರ್ಮಿಸಿದ್ದರು. ಅಕ್ಕಪಕ್ಕದ ಮನೆಯವರು ಬಿಡದಿಮನೆ ಆವರಣದಲ್ಲಿ ಓಡಾಡಲು ಜಾಗ ಬಿಡಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರಿಂದ ಸ್ಥಳಕ್ಕೆ ಗುರುವಾರ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಭೇಟಿ ನೀಡಿ ಪರಿಶೀಲಿಸಿದರು. ಬಿಡದಿಮನೆ ಆವರಣದಲ್ಲಿ ಹಾಕಿದ್ದ ಜಲ್ಲಿ, ಮರಳು ಮತ್ತು ಕಬ್ಬಿಣವನ್ನು ಸ್ಥಳಾಂತರಿಸುವಂತೆ ವಾರಸುದಾರರಿಗೆ ಸೂಚನೆ ನೀಡಿ ಆವರಣದ ಅಕ್ಕಪಕ್ಕದ ನಿವಾಸಿಗರಿಗೆ ಓಡಾಡಲು ಅನುಕೂಲ ಮಾಡಿಕೊಡಲಾಗುವುದು. ತುರ್ತು ಸಂದರ್ಭಗಳಲ್ಲಿ ವಾಹನವನ್ನು ಒಳಭಾಗಕ್ಕೆ ಬಿಡಲಾಗುವುದು. ಯಾರಿಗೂ ತೊಂದರೆ ಮಾಡುವುದು ನಮ್ಮ ಉದ್ದೇಶವಲ್ಲ. ಶ್ರೀ ಶಕುನ ರಂಗನಾಥಸ್ವಾಮಿ ರಥೋತ್ಸವ ನಡೆಯುವ ದೇವಾಲಯದ ಜಾಗವನ್ನು ಯಾರೂ ಬಳಸಿಕೊಳ್ಳಬಾರದು. ಇಲ್ಲಿನ ಜಾಗಕ್ಕೆ ಅದರದ್ದೇ ಆದ ಮಹತ್ವವಿದೆ. ಯಾರೂ ಖಾಸಗಿ ವಾಹನಗಳನ್ನು ಇಲ್ಲಿ ನಿಲ್ಲಿಸಬಾರದು ಎಂದರು.
ಗ್ರಾಮಸ್ಥ ಎಸ್.ಪಿ.ಲೋಕೇಶ್ ಮಾತನಾಡಿ, ದಾನವಾಗಿ ನೀಡಿದ್ದ ಜಾಗವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಜಾಗವನ್ನು  ಸರ್ವೇ ಮಾಡಿಸಿ ದೇವಾಲಯದ ಜಾಗ ಎಷ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ರಥ ಎಳೆಯುವ ಜಾಗವನ್ನು ಯಾವುದೇ ಸ್ವಂತ  ಕಾರ್ಯಗಳಿಗೆ ಬಳಸಿಕೊಳ್ಳಬಾರದು ಎಂದು ಮನವಿ ಮಾಡಿದರು.
ಕಂದಾಯ ನಿರೀಕ್ಷಕ ಜಿತೇಂದ್ರ, ಗ್ರಾಮದ ನಾಯಕ್ ಸಚ್ಚಿದಾನಂದ, ದೇವರಾಜು, ಋತಿಕ್, ಸುಪ್ರಿಮ್, ದಿವಾಕರ, ಕೇಶವರಂಗ ಸ್ವಯಂಸೇವಕರು ಹಾಗೂ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net