ಒಳ್ಳೆಯ ಕಾರ್ಯಗಳಿಂದ ಮಾತ್ರ ಮೋಕ್ಷ ಸಾಧ್ಯ

ಸಖರಾಯಪಟ್ಟಣದ ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯದಲ್ಲಿ  ಲೋಕಕಲ್ಯಾಣಾರ್ಥ ಅಷ್ಟಾಕ್ಷರ ಮಹಾಯಾಗದ ಪೂರ್ಣಾಹುತಿ ನೆರವೇರಿಸಲಾಯಿತು.
ಸಖರಾಯಪಟ್ಟಣದ ಶ್ರೀ ಶಕುನ ರಂಗನಾಥಸ್ವಾಮಿ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಅಷ್ಟಾಕ್ಷರ ಮಹಾಯಾಗದ ಪೂರ್ಣಾಹುತಿ ನೆರವೇರಿಸಲಾಯಿತು.
Published on
ಕಡೂರು: ಮಾನವ ಜನ್ಮ ಪುಣ್ಯವಾಗಿದ್ದು, ಇರುವಷ್ಟು ದಿನ ಒಳ್ಳೆಯ ಕಾರ್ಯಗಳಿಗೆ ತೊಡಗಿಸಿಕೊಂಡು ಮೋಕ್ಷ ಸಂಪಾದಿಸಬೇಕು ಎಂದು ಆಗಮ ಪಂಡಿತ ಡಾ.ಶ್ರೀನಿವಾಸ ರಾಘವನ್ ಹೇಳಿದರು.
ಸಖರಾಯಪಟ್ಟಣದ ಶ್ರೀಶಕುನ ರಂಗನಾಥಸ್ವಾಮಿ ದೇವಾಲಯದಲ್ಲಿ ಲೋಕಕಲ್ಯಾಣಕ್ಕಾಗಿ ಎರಡು ದಿನಗಳಿಂದ ಹಮ್ಮಿಕೊಂಡಿದ್ದ ಅಷ್ಟಾಕ್ಷರ ಮಹಾಯಾಗದ ಪೂರ್ಣಾಹುತಿ ನೆರವೇರಿಸಿ ಮಾತನಾಡಿ, ಮಾನವನ ಜನ್ಮ ಎಲ್ಲದಕ್ಕಿಂತ ಶ್ರೇಷ್ಠ. ಅದನ್ನು ಹಾಳು ಮಾಡದೆ ಲೋಕಕಲ್ಯಾಣಕ್ಕಾಗಿ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಅಷ್ಟಾಕ್ಷರ ಮಹಾಯಾಗ ಮಾಡುವುದು ಗ್ರಾಮ ಮತ್ತು ದೇಶದ ಒಳಿತಿಗಾಗಿ. ಇಲ್ಲಿನ ಮಳೆ ಬೆಳೆ ಮತ್ತು ಆರೋಗ್ಯ ಸುಧಾರಿಸಿ ಜನರು ಸಂತೃಪ್ತಿಯಿಂದ ಬಾಳುವಂತಾಗಬೇಕಿದೆ ಎಂದರು.
ಶ್ರೀ ಶಕುನ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ಚಕ್ರ ಸ್ನಾನ ನೆರವೇರಿಸಿ ಬಳಿಕ ಉತ್ಸವದೊಂದಿಗೆ ದೇವಸ್ಥಾನಕ್ಕೆ ಕರೆತರಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಲೋಕೇಶ್, ಶ್ರೀವತ್ಸ ಬಾರದ್ವಾಜ್, ಧಾರ್ಮಿಕ ಕಾರ್ಯದಲ್ಲಿ ಕೇಶವ ರಂಗದ ಯುವ ಪಡೆ, ದಾನಿಗಳು, ಭಕ್ತಾದಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net