ನದಿ ಹರಿವಿನ ಉದ್ದಕ್ಕೂ 19ಬ್ಯಾರೇಜ್‌ನಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು ಈ ಬ್ಯಾರೇಜ್ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಶ್ರೀಮಠದ ತೂಗು ಸೇತುವೆ ಕೆಳ ಭಾಗದಲ್ಲಿ ನೀರು ಸಂಗ್ರಹಿಸಲು ಬ್ಯಾರೇಜ್ ನಿರ್ಮಿಸಲಿದ್ದಾರೆ. ಅಡಿಪಾಯ ಹಾಕಲು ಈಗಾಗಲೇ ಪರೀಕ್ಷಾ ಕಾರ್ಯ ನಡೆಸಿದ್ದು, 1ಕೋಟಿ ರೂ.ವೆಚ್ಚದ ಟೆಂಡರ್ ಪ್ರಕ್ರಿಯೆ ನಡೆದಿದೆ. ಬೆಂಗಳೂರಿನ ಡಿಸೈನ್ ಕನ್ಸೆಲ್ಟಿಂಗ್ ಕಂಪನಿ ಗುತ್ತಿಗೆ ಪಡೆದುಕೊಂಡಿದೆ.