ಮರಾಠಿ ಕ್ಯಾಂಪ್, ಚೌಡಿಕಟ್ಟೆ ಗ್ರಾಮದ ಮಕ್ಕಳು ಬೈರಾಪುರ ಗ್ರಾಮದ ಶಾಲೆಗೆ ಹಾಗೂ ಅಂಗನವಾಡಿಗೆ ಹೋಗಲು, ಗ್ರಾಮಸ್ಥರು ಪಡಿತರ ಪಡೆಯಲು, ಮತದಾನ ಮಾಡಲು ಅಭಯಾರಣ್ಯದ ಮಧ್ಯ ಹಾದು ಹೋಗಿರುವ ಕಾಡು ದಾರಿಯಲ್ಲಿ ಹೋಗಬೇಕು. ಹಾಗಾಗಿ ಪರ್ಯಾಯ ಪ್ರದೇಶದಲ್ಲಿ ಹೊಸದಾಗಿ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದಾರೆ. ಹೊಸ ರಸ್ತೆ ನಿರ್ಮಾಣಕ್ಕೆ ಅಂದಾಜು 1.50 ಕೋಟಿ ರೂ.ಅನುದಾನದ ಅವಶ್ಯಕತೆಯಿದೆ. ತಾಲೂಕಿಗೆ ಟಾಸ್ಕ್ ೆರ್ಸ್‌ನಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಮರಾಠಿ ಕ್ಯಾಂಪ್‌ಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಹೊಸ ಕೊಳವೆ ಬಾವಿ ಕೊರೆಸಲು 1.50 ಲಕ್ಷ ರೂ.ಅನುದಾನ ಮೀಸಲಿಡಲಾಗಿದೆ ಇಒ ಎಚ್.ಡಿ.ನವೀನ್‌ಕುಮಾರ್ ತಿಳಿಸಿದರು.