ಮೂಡಿಗೆರೆ: ಆರು ವರ್ಷದಿಂದ ಮೇ ಕೊನೆಯ ವಾರದಲ್ಲಿ ಮುಂಗಾರು ಆರಂಭವಾಗುತ್ತಿತ್ತು. ಈ ಬಾರಿ ಜೂನ್ ಅಂತ್ಯದ ದಿನಗಳು ಹತ್ತಿರವಾಗುತ್ತಿದ್ದರೂ ಮಳೆಯಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾದರೆ ರೈತರು ಮತ್ತು ಕಾಫಿ ಬೆಳೆಗಾರರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಮುಂಗಾರು ಆರಂಭವಾಗದಿರುವ ಕಾರಣ ತಾಲೂಕಿನ ಕಾಫಿ, ಕಾಳುಮೆಣಸು ಬೆಳೆಗಾರರು ಹಾಗೂ ಭತ್ತ, ಶುಂಠಿ ಬೆಳೆಯುವ ರೈತರನ್ನು ಚಿಂತೆಗೀಡು ಮಾಡಿದೆ.