ಬೆಳೆ ಹಾನಿ ಸಮೀಕ್ಷೆಗೆ ಸಹಕಾರ ನೀಡಲು ಮನವಿ

ಎನ್.ಆರ್.ಪುರ ತಾಲೂಕಿನ ರೈತರ ಜಮೀನಿಗೆ ತಹಸೀಲ್ದಾರ್ ಡಾ.ನೂರುಲ್‌ಹುದಾ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
ಎನ್.ಆರ್.ಪುರ ತಾಲೂಕಿನ ರೈತರ ಜಮೀನಿಗೆ ತಹಸೀಲ್ದಾರ್ ಡಾ.ನೂರುಲ್‌ಹುದಾ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
Published on
ಎನ್.ಆರ್.ಪುರ: ಸರ್ಕಾರ ಎನ್.ಆರ್.ಪುರ ತಾಲೂಕನ್ನು ಮಧ್ಯಮ ಬರಪೀಡಿತ ತಾಲೂಕು ಎಂದು ಘೋಷಿಸಿದ ಹಿನ್ನೆಲೆಯಲ್ಲಿ ತಾಲೂಕಿನ ರೈತರ ಬೆಳೆ ಹಾನಿ ದಾಖಲಿಸಲು ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಗಳ ಜಂಟಿ ತಂಡದಿಂದ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಹಸೀಲ್ದಾರ್ ಡಾ.ನೂರುಲ್‌ಹುದಾ ತಿಳಿಸಿದರು.
ತಾಲೂಕಿನ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿ, ತಾಲೂಕಿನ ರೈತರು ತಮ್ಮ ಗ್ರಾಮಗಳಿಗೆ ಆಗಮಿಸುವ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಅಧಿಕಾರಿಗಳಿಗೆ ಬೆಳೆ ಸಮೀಕ್ಷೆಗೆ ಸಹಕಾರ ನೀಡಬೇಕು. ಬೆಳೆಹಾನಿ ಪರಿಹಾರಕ್ಕೆ ಬೆಳೆ ಸಮೀಕ್ಷೆ ಮುಖ್ಯವಾಗಿದೆ. ಸಮೀಕ್ಷೆಯಲ್ಲಿ ಬೆಳೆ ದಾಖಲೆಯಾಗಿರುವುದು ಕಡ್ಡಾಯ. ಬೆಳೆ ಸಮೀಕ್ಷೆಯಲ್ಲಿ ದಾಖಲಾದ ಬೆಳೆ ಮತ್ತು ಹಾನಿ ಸಮೀಕ್ಷೆಯಲ್ಲಿ ದಾಖಲಾದ ಬೆಳೆ ವಿವರ ಹೊಂದಾಣಿಕೆಯಾಗದಿದ್ದರೆ ಬೆಳೆ ಹಾನಿ ಪರಿಹಾರ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ವಿವರಗಳು ಬೆಳೆ ಸಮೀಕ್ಷೆ (ಕ್ರಾಪ್ ಸರ್ವೇ) ಆ್ಯಫ್‌ನಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಬೆಳೆ ಸಮೀಕ್ಷೆ ಕಾರ್ಯಕ್ಕೆ ನಿಯೋಜಿತವಾಗಿರುವ ಸಮೀಕ್ಷೆ ಸಿಬ್ಬಂದಿ ಜತೆಗೆ ರೈತರು ಸಮನ್ವಯ ಸಾಧಿಸಿ, ತಮ್ಮ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಿಕೊಳ್ಳಬೇಕು. ನಿಯೋಜಿತ ಪಿಆರ್ ಮೂಲಕ ಬೆಳೆ ಸಮೀಕ್ಷೆ ಮಾಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ರೈತರು ಸ್ವತಃ ಕ್ರಾಪ್ ಸರ್ವೇ ಆ್ಯಫ್ ಮೂಲಕ ತಮ್ಮ ಬೆಳೆ ವಿವರವನ್ನು ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net