ಖಾಸಗಿ ಕಂಪನಿಯ ಅರ್ಜಿ ತಿರಸ್ಕರಿಸಿ

ಮೂಡಿಗೆರೆ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಮೆಸ್ಕಾಂ ಎಇಇ ಜಿತೇಂದ್ರಕುಮಾರ್, ಕಿರಣ್, ರವಿಕುಮಾರ್, ಷಣ್ಮುಖ, ಜಾವೇದ್, ಮಂಜುನಾಥ್ ಇತರರಿದ್ದರು.
ಮೂಡಿಗೆರೆ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಯಿತು. ಮೆಸ್ಕಾಂ ಎಇಇ ಜಿತೇಂದ್ರಕುಮಾರ್, ಕಿರಣ್, ರವಿಕುಮಾರ್, ಷಣ್ಮುಖ, ಜಾವೇದ್, ಮಂಜುನಾಥ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್ ಗುತ್ತಿಗೆದಾರರರಿಂದ
  • ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ
ಮೂಡಿಗೆರೆ: ವಿವಿಧ ವಿದ್ಯುತ್ ವಿತರಣಾ ಕಂಪನಿಗಳ ವ್ಯಾಪ್ತಿಯ 19 ಕಂದಾಯ ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ಕೋರಿ ಖಾಸಗಿ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಮೂಡಿಗೆರೆ ಕೆಪಿಟಿಸಿಎಲ್ ಎಂಪ್ಲಾಯಿಸ್ ಯೂನಿಯನ್ ಪದಾಧಿಕಾರಿಗಳು ಹಾಗೂ ವಿದ್ಯುತ್ ಗುತ್ತಿಗೆದಾರರು ಮೂಡಿಗೆರೆ ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಾರ್ಮಿಕ ಮುಖಂಡ ಸುನಿಲ್ ಮಾತನಾಡಿ, ವಿದ್ಯುತ್ ಕಾಯ್ದೆ 2003ರ ಕಲಂ 14(6)ರ ಅಡಿಯಲ್ಲಿ ಖಾಸಗಿ ಕಂಪನಿ ಸಲ್ಲಿಸಿರುವ ಅರ್ಜಿಯು ಅಪೂರ್ಣವಾಗಿದೆ. ಸಮಾನಾಂತರ ವಿದ್ಯುತ್ ವಿತರಣೆಗೆ ಅಗತ್ಯವಿರುವ ವಿದ್ಯುತ್ ಮೂಲ ಖರೀದಿ ಮತ್ತು ಉತ್ಪಾದನಾ ವೆಚ್ಚ, ಮೂಲಸೌಕರ್ಯ ನಿರ್ಮಾಣ, ಬಂಡವಾಳ ಹೂಡಿಕೆ, ತಾಂತ್ರಿಕ ಯೋಜನೆ, ಸಿಬ್ಬಂದಿ ನೇಮಕಾತಿ ಕುರಿತ ಸಮಗ್ರ ಮಾಹಿತಿಯನ್ನು ಒದಗಿಸಿಲ್ಲ. ಹೀಗೆ ಅಪೂರ್ಣ ಅರ್ಜಿ ಸಲ್ಲಿಸಿರುವ ಖಾಸಗಿ ಕಂಪನಿಯ ಅರ್ಜಿಯನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಮುಖಂಡ ಧ್ರುವ ಮಾತನಾಡಿ. ರಾಜ್ಯದ ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ವ್ಯಾಪ್ತಿಯ 19 ಜಿಲ್ಲೆಗಳಲ್ಲಿ ಈಗಿರುವ ಸಾರ್ವಜನಿಕ ವಿದ್ಯುತ್ ವಿತರಣಾ ಕಂಪನಿಗಳಿಗೆ ಸಮಾನಾಂತರವಾಗಿ ಖಾಸಗಿ ಕಂಪನಿಗೆ ಪರವಾನಿಗೆ ನೀಡುವುದು ವಿದ್ಯುತ್ ಕ್ಷೇತ್ರದ ಖಾಸಗೀಕರಣಕ್ಕೆ ದಾರಿ ಮಾಡಿಕೊಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೆಸ್ಕಾಂ ಎಇಇ ಜಿತೇಂದ್ರಕುಮಾರ್, ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಕಿರಣ್, ಮೆಸ್ಕಾಂ ಕಿರಿಯ ಅಭಿಯಂತ ರವಿಕುಮಾರ್, ಷಣ್ಮುಖ, ಮಂಜುನಾಥ್, ಜಾವೇದ್, ಕರಿಯಪ್ಪ, ಗುತ್ತಿಗೆದಾರರಾದ ಪಾಂಡು, ವಿನ್ನಿ, ಉಮೇಶ್, ರವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net