ರೈತರು ಜುಲೈ ಮೊದಲ ವಾರದಿಂದ ಆಗಸ್ಟ್ ಎರಡನೇ ವಾರದವರೆಗೆ ಬಿತ್ತನೆ ಮಾಡುವುದು ವಾಡಿಕೆ. ಆದರೆ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜುಲೈನಲ್ಲಿ ತಾಲೂಕಿನಲ್ಲಿ ಶೇ.55ರಷ್ಟು ವಾಡಿಕೆಗಿಂತ ಮಳೆ ಕೊರತೆ ಆಗಿದೆ. ಆಗಸ್ಟ್‌ನಲ್ಲಿ ಇಲ್ಲಿಯವರೆಗೆ ಶೇ.36ರಷ್ಟು ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಅತಿ ಹೆಚ್ಚು ಕೊರತೆ ಹಿರೇನಲ್ಲೂರು, ಸಿಂಗಟಗೆರೆ, ಸಖರಾಯಪಟ್ಟಣ ಮತ್ತು ಪಂಚನಹಳ್ಳಿ ಹೋಬಳಿಯಲ್ಲಿ ಶೇ.60ರಿಂದ ಶೇ.74ರವರೆಗೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ರೈತರು 45 ಸಾವಿರ ಹೆಕ್ಟೇರ್ ರಾಗಿ ಪ್ರದೇಶದ ಗುರಿ ಹೊಂದಿದ್ದು, ಇದುವರೆಗೂ 1800 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಸುಮಾರು 43200 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಮಳೆ ಕೊರತೆಯಿಂದ ಬಿತ್ತನೆ ಆಗಿಲ್ಲ ಎಂದು ಮಾಹಿತಿ ನೀಡಿದರು.