ಎಲ್ಲ ಶಾಲೆಗಳಲ್ಲಿ ರಾಮಾಯಣ ಸ್ಪರ್ಧೆ ಆಯೋಜನೆ

ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಭಜನಾ ಸ್ಪರ್ಧೆ ಕಾರ್ಯಕ್ರಮಕ್ಕೆ ಅಭಿಷೇಕ್ ಚಾಲನೆ ನೀಡಿದರು.
ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಭಜನಾ ಸ್ಪರ್ಧೆ ಕಾರ್ಯಕ್ರಮಕ್ಕೆ ಅಭಿಷೇಕ್ ಚಾಲನೆ ನೀಡಿದರು.
Published on
ಎನ್.ಆರ್.ಪುರ: ಶಂಕರ ತತ್ವ ಪ್ರಸಾರ ಅಭಿಯಾನದಡಿ ಮುಂದಿನ ದಿನಗಳಲ್ಲಿ ಎಲ್ಲ ಶಾಲೆಗಳಲ್ಲಿ ರಾಮಾಯಣ ಸ್ಪರ್ಧೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಶಂಕರತತ್ವ ಪ್ರಸಾರ ಅಭಿಯಾನದ ಜಿಲ್ಲಾ ಸಂಚಾಲಕ ಸದಾಶಿವ ಭಟ್ ಹೇಳಿದರು.
ಪಟ್ಟಣದಲ್ಲಿ ಶೃಂಗೇರಿ ಶ್ರೀಶಾರದ ಪೀಠ ಶಂಕರತತ್ವ ಪ್ರಸಾರ ಅಭಿಯಾನದಡಿ ಭಜನಾ ಮಂಡಳಿ ಸದಸ್ಯರಿಗೆ ಆಯೋಜಿಸಿದ್ದ ವಲಯಮಟ್ಟದ ಭಜನಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಮಲೆನಾಡು ವಿಭಾಗದ ಭಜನಾ ಮಂಡಳಿ ಸದಸ್ಯರಿಗೆ 4 ವಲಯಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಶೃಂಗೇರಿ ಮಠದಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ನಡೆಯಲ್ಲಿದೆ. ಭಜನ ಮಂಡಳಿಯಲ್ಲಿ ಮಹಿಳಾ ತಂಡದ ಜತೆ 4 ಪುರಷರು ಮತ್ತು ಮಕ್ಕಳ ತಂಡವನ್ನು ರಚನೆ ಮಾಡಲಾಗುತ್ತಿದೆ ಎಂದರು.
ಶಂಕರಾಚಾರ್ಯರ ಸ್ತೊತ್ರಗಳನ್ನು ಅಭ್ಯಾಸ ಮಾಡಬೇಕು. ಸ್ತೊತ್ರಗಳು ಕಷ್ಟ್ಟವಾಗಿದ್ದು ತಿಳಿದವರಿಂದ ಕಲಿತುಕೊಳ್ಳಬೇಕು. ಸ್ತೊತ್ರಗಳ ಅಧ್ಯಯನದಿಂದ ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಬದಲಾವಣೆ ಕಂಡುಕೊಳ್ಳಬಹುದು ಸ್ತೊತ್ರಗಳನ್ನು ತಪ್ಪಾಗಿ ಪಠಿಸಿದರೆ ಅಪರಾಧವಾಗುತ್ತದೆ. ವೇದಾಂತ ಭಾರತಿ 62 ಸ್ತೊತ್ರಗಳ ಪುಸ್ತಕವನ್ನು ಹೊರತಂದಿದ್ದು, ಇದನ್ನು ತಿಳಿದವರಿಂದ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ಶಂಕರತತ್ವ ಪ್ರಸಾರ ಅಭಿಯಾನದ ತಾಲೂಕು ಸಂಚಾಲಕ ಎನ್.ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಶೃಂಗೇರಿ ಶಾರದ ಪೀಠದ ಗುರುಗಳ ಆದೇಶದಂತೆ ಭಜನಾ ಮಂಡಳಿಗಳು ಯಾವ ರೀತಿ ಭಜನೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಶಂಕರ ವೈಭವಮ್ ಎಂಬ ಹೆಸರಿನಲ್ಲಿ ಭಜನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ತಾಲೂಕು ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ಭಜನಾ ಮಂಡಳಿಗಳು ಶೃಂಗೇರಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತವೆ ಎಂದರು.
ತಾಲೂಕು ಬ್ರಾಹ್ಮಣ ಮಹಾ ಸಭಾ ಖಜಾಂಜಿ ಏ.ಎಸ್.ಅಭಿಷೀಕ್, ಕೊಪ್ಪ ತಾಲೂಕು ಸಂಚಾಲಕ ರವಿಪಟವರ್ಧನ್, ಕಳಸ ಸಂಚಾಲಕ ನಾಗಭೂಷಣ್, ಶೃಂಗೇರಿ ಸಂಚಾಲಕ ಶ್ರೀಧರ್, ಶಿಕ್ಷಕಿ ಭಾರತಿ, ವಾಸಂತಿ ರಾಮಕೃಷ್ಣ ,ಭಾರತಿ ಅರವಿಂದ ಆಚಾರ್ಯ, ಅಪರ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net