ಭಾನುವಾರ ನಡೆದ ನರಸಿಂಹರಾಜಪುರ ರೈಲ್ವೆ ಹೋರಾಟ ಸಮಿತಿ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ ಭದ್ರಾವತಿಯಿಂದ ಎನ್.ಆರ್.ಪುರಕ್ಕೆ ರೈಲು ಮಾರ್ಗವಿತ್ತು. ಈಗ ಶಿವಮೊಗ್ಗದಿಂದ ಭದ್ರಾವತಿ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಮೂಲಕ ಮಂಗಳೂರು ತಲುಪುವ ಯೋಜನೆ ಆಗಬೇಕು ಎಂಬುವುದು ಈ ಸಮಿತಿ ಮುಖ್ಯಗುರಿ. ನಮ್ಮೂರಿನ ಅಭಿವೃದ್ಧಿಗಾಗಿ ಎನ್.ಆರ್.ಪುರಕ್ಕೆ ರೈಲು ಬೇಕೆನ್ನುವ ನಮ್ಮ ಹೋರಾಟಕ್ಕೆ ಪಕ್ಷಾತೀತವಾಗಿ, ಜಾತ್ಯತೀತವಾಗಿ, ಸಂಘ ಸಂಸ್ಥೆಗಳು, ಸಾರ್ವಜನಿಕರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.