ಡಿಎಸ್‌ಬಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪಠ್ಯತರ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಸಂದರ್ಭಕ್ಕೆ ತಕ್ಕಂತೆ ದೊರೆಯುತ್ತದೆ. ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳು ಸೇರಿದೆ ಮುಚ್ಚುವ ಶಾಲೆಗಳು ಕೂಡ ಮತ್ತೆ ತೆರೆಯಲು ಸಾಧ್ಯವಿದೆ. ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಬೋಧಕ ವರ್ಗ, ಗುಣಮಟ್ಟದ ಶಿಕ್ಷಣ, ಸ್ಮಾರ್ಟ ಕ್ಲಾಸ್, ಕಂಪ್ಯೂಟರ್ ಲ್ಯಾಬ್, ಮಲ್ಟಿ ಜಿಮ್, ಸಿಂಥೆಟಿಕ್ ಮ್ಯಾಟ್, 30 ಸಾವಿರಕ್ಕಿಂತ ಹೆಚ್ಚಿನ ಪುಸ್ತಕವಿರುವ ಲೈಬ್ರರಿ ಎಲ್ಲವನ್ನು ಹೊಂದಿದೆ ಎಂದರು.