ಮೂಡಿಗೆರೆ ತಾಲೂಕು ಕಿರುಗುಂದ ಗ್ರಾಮದಲ್ಲಿ ಚಿತ್ರನಟ ಪುನೀತ್ ರಾಜಕುಮಾರ್ ಬಳಗದಿಂದ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆಲುವು ಪಡೆದ ತಂಡಗಳು.
Published on:
Copied
Follow Us
ಮೂಡಿಗೆರೆ: ಸಮಾಜ ಸೇವೆ ಮೂಲಕ ಮಾದರಿಯಾದ ಚಿತ್ರನಟ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಪಂದ್ಯಾವಳಿ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಮಾಜಿ ಮಂಡಲ ಪಂಚಾಯಿತಿ ಸದಸ್ಯ ಕೆ.ಕೆ.ರಾಮಯ್ಯ ಹೇಳಿದರು.
ಕಿರುಗುಂದ ಗ್ರಾಮದಲ್ಲಿ ಪುನೀತ್ ರಾಜಕುಮಾರ್ ಬಳಗದಿಂದ ಅವರ ಜನ್ಮದಿನದ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಪುನೀತ್ ರಾಜಕುಮಾರ್ ಅವರು ಅನೇಕ ಅನಾಥಾಶ್ರಮ, ಶಾಲೆ, ಗೋಶಾಲೆಗಳಿಗೆ ದೇಣಿಗೆ ನೀಡಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಿದ್ದರು. ಪುನೀತ್ ನಿಧನದ ನಂತರ ಅವರ ಜನಸೇವೆ ಬೆಳಕಿಗೆ ಬಂದಿದೆ. ಅವರ ಆದರ್ಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಪುನೀತ್ ಅಭಿಮಾನಿ ಬಳಗದ ಸದಸ್ಯ ಕೆ.ಎಲ್.ಪುನೀತ್ ಮಾತನಾಡಿ, ಚಿತ್ರನಟ ಪುನೀತ್ ರಾಜಕುಮಾರ್ ಆದರ್ಶವನ್ನು ಮೈಗೂಡಿಸಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಅವರೊಬ್ಬ ಚಿತ್ರನಟ ಮಾತ್ರವಲ್ಲ. ಸಮಾಜ ಸುಧಾರಕ ಎಂದು ಹೇಳಿದರು.
ಕಿರುಗುಂದ ಗ್ರಾಪಂ ಮಾಜಿ ಅಧ್ಯಕ್ಷ ಯು.ಎಚ್.ರಾಜಶೇಖರ್, ಮಾಜಿ ಸದಸ್ಯ ಎಂ.ಸಿ.ಆದರ್ಶ, ಪಿಡಿಒ ಕೃಷ್ಣಪ್ಪ, ಕಾರ್ಯದರ್ಶಿ ನಂಜಯ್ಯ, ನಂಜುಂಡೇಗೌಡ, ರಾಹುಲ್, ಹರಿಭಾರ್ಗವ, ಮಂಜುನಾಥ್, ಪರಮೇಶ್ವರ, ಚನ್ನಕೇಶವ, ಕಿರಣ್, ಕೌಶಿಕ್, ಚಂದ್ರಪ್ಪ ಇತರರಿದ್ದರು.