ಕೆಂಪೇಗೌಡರ ಬಗ್ಗೆ ಆಳ ಅಧ್ಯಯನಕ್ಕೆ ಅಗತ್ಯ ಅನುದಾನ ನೀಡಿ

ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು  ಡಾ.ಕೆ.ಪಿ.ಅಂಶುಮಂತ್ ಉದ್ಘಾಟಿಸಿದರು.
ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಡಾ.ಕೆ.ಪಿ.ಅಂಶುಮಂತ್ ಉದ್ಘಾಟಿಸಿದರು.
Published on
ಎನ್.ಆರ್.ಪುರ: ನಾಡ ಪ್ರಭು ಕೆಂಪೇಗೌಡರ ದೂರದೃಷ್ಠಿ ಬಗ್ಗೆ ಆಳವಾದ ಅಧ್ಯಯನ ನಡೆಸಲು ಅನುದಾನ ಬಿಡುಗಡೆ ಮಾಡಬೇಕು ಎಂದು ಕುವೆಂಪು ವಿದ್ಯಾನಿಕೇತನ ಸಂಸ್ಥೆ ಸ್ಥಾಪಕ ಕಾರ್ಯದರ್ಶಿ ಕೆ.ಸಿ.ಶಂಕರ್ ಒತ್ತಾಯಿಸಿದರು.
ಪಟ್ಟಣದ ಡಿಸಿಎಂಸಿ ಪ್ರೌಢ ಶಾಲೆ ಸಭಾಂಗಣದಲ್ಲಿ ತಾಲೂಕು ಒಕ್ಕಲಿಗರ ಸಂಘ ಹಾಗೂ ತಾಲೂಕು ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಪ್ರಪಂಚದ ಅತಿ ದೊಡ್ಡ ಸುಂದರವಾದ 12 ನಗರದಲ್ಲಿ ಒಂದಾಗಿದೆ. ಕೆಂಪೇಗೌಡರು ನೀರಾವರಿ ತಜ್ಞರು, ವಿಜ್ಞಾನಿ ಹಾಗೂ ಇಂಜಿನಿಯರ್ ಆಗಿದ್ದಾರೆ. ಬೆಂಗಳೂರಿನಲ್ಲಿ ನೂರಾರು ದೇವಾಲಯ, ಕೆರೆ, ಕೋಟೆ, ಹಜಾರ ಕಟ್ಟಿಸಿದ್ದರು. ನೂರಾರು ಕುಶಲ ಕರ್ಮಿಗಳನ್ನು ಕರೆಸಿ ಅವರ ಕಸುಬಿಗೆ ಅನುಗುಣವಾಗಿ ಪೇಟೆಗಳನ್ನು ಸೃಷ್ಠಿ ಮಾಡಿದರು. ವಿಜಯ ನಗರದ ಸಾಮ್ರಾಜ್ಯದ ಹಂಪಿಯನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಬೆಂಗಳೂರು ನಗರ ಕಟ್ಟಿದರು ಎಂದರು.
ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿ, ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಇಂದು ವಿಶ್ವವೇ ತಿರುಗಿ ನೋಡುತ್ತಿದೆ. ಕೆಂಪೇಗೌಡರ ಜಯಂತಿಗಾಗಿ ಸರ್ಕಾರ ಪ್ರತಿ ತಾಲೂಕಿಗೆ 1ಲಕ್ಷ ರೂ.ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ಖಜಾಂಚಿ ಕಟಗಳಲೆ ಲೋಕೇಶ್, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ನಿಯೋಜಿತ ಅಧ್ಯಕ್ಷೆ ಸುಮಾ ಶಾಮಯ್ಯ, ಬಿಇಒ ಶಬಾನಾ ಅಂಜುಮ್, ಪ್ರೇಮಾ ಶ್ರೀ ನಿವಾಸ್, ವಾಲ್ಮೀಕಿ ಶ್ರೀನಿವಾಸ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net