ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾತನಾಡಿ, ಪಪಂಗೆ 2025-26ನೇ ಸಾಲಿನಲ್ಲಿ ಆಸ್ತಿ ತೆರಿಗೆ 36.62 ಲಕ್ಷ ರೂ. ಬರಬೇಕಾಗಿತ್ತು. ಇದರಲ್ಲಿ 33.31 ಲಕ್ಷ ರೂ. ವಸೂಲಾಗಿದೆ. ಮಾರ್ಚ್ ಅಂತ್ಯದೊಳಗೆ ಉಳಿದ ತೆರಿಗೆ ವಸೂಲಿ ಮಾಡಲಾಗುವುದು. ಕುಡಿಯುವ ನೀರಿನ ಶುಲ್ಕ 20.10 ಲಕ್ಷ ರೂ. ಬರಬೇಕಾಗಿತ್ತು. ಇದರಲ್ಲಿ 14 ಲಕ್ಷ ರೂ. ವಸೂಲಾತಿಯಾಗಿದೆ. ವ್ಯಾಪಾರ ಪರವಾನಗಿಯಿಂದ 2.25 ಲಕ್ಷ ರೂ. ಬರಬೇಕಾಗಿತ್ತು. ಇದರಲ್ಲಿ 1.96 ಲಕ್ಷ ರೂ. ವಸೂಲಾಗಿದೆ ಎಂದು ಮಾಹಿತಿ ನೀಡಿದರು. ಸುಬ್ರಹ್ಮಣ್ಯ, ರಜಿ, ಪಪಂ ಸಮುದಾಯ ಸಂಘಟನಾಧಿಕಾರಿ ಲಕ್ಷ್ಮಣ್ ಗೌಡ ಇದ್ದರು.