ಜೆ.ಎಂ ರಸ್ತೆಯ, ಮುಖ್ಯರಸ್ತೆಯಲ್ಲಿ ಕೆಲವೆಡೆ ನಿರ್ಮಿಸಿರುವ ಬಾಕ್ಸೃ್ ಚರಂಡಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ನಾಲ್ಕೈದು ತಿಂಗಳ ಹಿಂದೆ ಕಾಂಕ್ರೀಟ ಬಾಕ್ಸೃ್ ಚರಂಡಿ ನಿರ್ಮಿಸಲಾಗಿದೆ. ಅದು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಕೆ.ಎಂ ರಸ್ತೆಯಲ್ಲಿರುವ ಹೋಟೆಲ್, ಬೇಕರಿ, ರೆಸ್ಟೋರೆಂಟ್‌ಗಳಿಂದ ಹೊರಡುವ ತ್ಯಾಜ್ಯಯುಕ್ತ ಕೊಳಚೆ ನೀರು ಚರಂಡಿಯಿಂದ ಹರಿಯುವುದರಿಂದ ಹಳೆ ಚರಂಡಿ ತೆರವುಗೊಳಿಸಿದ ಸ್ಥಳದಲ್ಲಿ 6 ತಿಂಗಳಿನಿಂದ ಕೊಳಚೆ ನೀರು ಹೆಪ್ಪುಗಟ್ಟಿ ನಿಂತಿದೆ. ಸ್ಥಳಿಯ ನಿವಾಸಿಗಳು ಮೂಗು ಮುಚ್ಚಿಕೊಂಡು ವಾಸ ಮಾಡುವಂತಾಗಿದೆ. ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ ಎಂದು ಆರೋಪಿಸಿದರು.