ನಗರದ ಪ್ರೆಸ್‌ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ ರಾಜ್ಯದಲ್ಲಿ ಸುಮಾರು ಅರ್ಧಕೋಟಿ ಮತದಾರರ ಹಕ್ಕನ್ನು ಕಸಿದುಕೊಂಡು ಚುನಾವಣೆ ನಡೆಸಲಾಗುತ್ತಿದೆ. ಇದು ಪ್ರಜಾತಂತ್ರ ಪ್ರೇಮಿಗಳ ಎದೆಗೆ ಇರಿದಂತಾಗಿದೆ. ಪಶ್ಚಿಮಬಂಗಾಳಕ್ಕೆ ಬಂದಿರುವ ಸ್ಥಿತಿ ಕರ್ನಾಟಕಕ್ಕೂ ಬರುವ ಸಾಧ್ಯತೆಗಳಿದ್ದು, ಈ ಕುರಿತು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.
ಸುಮಾರು ೧೩ ರಾಜ್ಯಗಳ ೬.೫ ಕೋಟಿ ಜನರ ಮತದಾನದ ಹಕ್ಕು ರದ್ದಾಗಿದೆ. ಇದು ಹಂತಹಂತವಾಗಿ ದೇಶದ ವಿದ್ಯಾಮಾನವಾಗಲಿದೆ. ಭಾರತದ ಪ್ರಜಾತಂತ್ರಕ್ಕೆ ಇಂಜೆಕ್ಷನ್ ಮೂಲಕ ವಿಷ ಉಣಿಸಲಾಗುತ್ತಿದೆ. ನಾವುಗಳ ಮೌನವಹಿಸುತ್ತಾ ಸಾಗಿದರೆ ಈ ದೇಶ ದೇಶವಾಗಿ ಉಳಿಯುವುದಿಲ್ಲ ಎಂದರು.
ಬೆಂಗಳೂರಿನಲ್ಲಿ ವಿವಿಧ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಏ. ೨೩ರ ಕರಾಳ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.ಕರ್ನಾಟಕದಲ್ಲಿ ಎಸ್‌ಐಆರ್ ವಿರೋಧಿಸುತ್ತಿರುವ ಪ್ರಗತಿಪರ ಸಂಘಟನೆಗಳು, ಜಾತ್ಯತೀತ ಪಕ್ಷಗಳು ಒಗ್ಗೂಡಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಟಿ.ಬಿ.ದಿವಾಕರ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ನೀಡಿರುವ ಮತದಾನದ ಹಕ್ಕನ್ನು ಕಳೆದುಕೊಳ್ಳಲು ನಾವು ಇಚ್ಚಿಸುವುದಿಲ್ಲ. ಏ ೨೩ ರಂದು ನಡೆಯುವ ಪ್ರತಿಭಟನೆಗೆ ಪ್ರಗತಿಪರರು ಕೈಜೋಡಿಸಬೇಕು.ಕರ್ನಾಟಕಕ್ಕೆ ಬರಲಿರುವ ಅಪಾಯವನ್ನು ತಡೆಯಬೇಕಾಗಿದೆ ಎಂದು ಹೇಳಿದರು.