ಪಶ್ಚಿಮಘಟ್ಟದ ಸಸ್ಯಗಳ ಸಂರಕ್ಷಿಸಿ

ಹೊಸದೇವರಹಡ್ಲು ಸಂಶೋಧನಾ ಕೇಂದ್ರದಲ್ಲಿ ಅಜಸ್ರ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಋಷ್ಯಶೃಂಗ, ಡಾ. ಕೃಷ್ಣ ಕುಲಕರ್ಣಿ, ಕಿರಣ್, ಶ್ರೀನಿ, ಕೀರ್ತನ್ ಇದ್ದರು.
ಹೊಸದೇವರಹಡ್ಲು ಸಂಶೋಧನಾ ಕೇಂದ್ರದಲ್ಲಿ ಅಜಸ್ರ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಋಷ್ಯಶೃಂಗ, ಡಾ. ಕೃಷ್ಣ ಕುಲಕರ್ಣಿ, ಕಿರಣ್, ಶ್ರೀನಿ, ಕೀರ್ತನ್ ಇದ್ದರು.
Published on
ಶೃಂಗೇರಿ: ಪಶ್ಚಿಮಘಟ್ಟದ ಅಪರೂಪದ ಸಸ್ಯಗಳು ನಮ್ಮ ಸುತ್ತಮುತ್ತ ಹಾಗೂ ಮನೆಯಂಗಳದಲ್ಲಿವೆ. ಅದನ್ನು ಗುರುತಿಸುವ ಸೂಕ್ಷ್ಮತೆ ನಮ್ಮಲ್ಲಿ ಇರಬೇಕು ಎಂದು ಜೆಸಿಬಿಎಂ ಕಾಲೇಜಿನ ಸಸ್ಯಶಾಸ ವಿಭಾಗದ ಮುಖ್ಯಸ್ಥ ಡಾ. ಕುಮಾರಸ್ವಾಮಿ ತಿಳಿಸಿದರು.
ತಾಲೂಕು ಹೊಸದೇವರಹಡ್ಲು ಸಂಶೋಧನಾ ಕೇಂದ್ರದಲ್ಲಿ ಭಾನುವಾರ ಅಜಸ್ರ ಚಾರಿಟೆಬಲ್ ಟ್ರಸ್ಟ್ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಎಲೆಗಳ ರೂಪುರೇಷೆಗಳ ಆಧಾರದಲ್ಲಿ ಸಸ್ಯಗಳನ್ನು ಶಾಸೀಯವಾಗಿ ಗುರುತಿಸುವಿಕೆ ಕುರಿತು ಮಾತನಾಡಿದರು.
ಸಸ್ಯಗಳ ವೈಜ್ಞಾನಿಕ ದೃಷ್ಟಿಕೋನ ನೋಡಿದಾಗ ಹಲವು ವಿಷಯಗಳು ನಮ್ಮ ಅರಿವಿಗೆ ಬರುತ್ತವೆ. ಸಸ್ಯಗಳು ಮನಸ್ಸಿಗೂ ಮುದ ನೀಡುವ ಪ್ರಕ್ರಿಯೆಯಾಗಿದೆ. ಪ್ರಕೃತಿ ನಮಗೆ ಎಲ್ಲವನ್ನೂ ನೀಡುತ್ತಿದ್ದು ಅದನ್ನು ಜತನದಿಂದ ಸಂರಕ್ಷಿಸುವ ಕಾಳಜಿ ನಮ್ಮಲ್ಲಿರಬೇಕು. ಅಪರೂಪದ ಔಷಧೀಯ ಗುಣಗಳನ್ನು ಹೊಂದಿದ ಸಸ್ಯಗಳನ್ನು ನಾವು ಬೆಳೆಸಿ ಪೋಷಿಸಬೇಕಿದೆ ಎಂದರು.
ಟ್ರಸ್ಟ್ ಅಧ್ಯಕ್ಷ ಡಾ. ಅಭಿಜಿತ್ ಮಾತನಾಡಿ, ಸಸ್ಯಗಳನ್ನು ಬೇರೆ ಬೇರೆಯಾಗಿ ವಿಂಗಡಿಸಬಹುದು. ಬ್ರಿಟಿಷ್ ವಿಜ್ಞಾನಿ ಪಾಸ್ಕಲ್ ಅವರು ಎಲೆಗಳ ರಚನೆಯನ್ನು ಗಮನಿಸಿ ಅದನ್ನು ಗುರುತಿಸುವ ವಿಧಾನಗಳನ್ನು ಜನಪ್ರಿಯಗೊಳಿಸಿದ್ದು ಪಶ್ಚಿಮಘಟ್ಟದ ಅಪರೂಪದ ಒಟ್ಟು 56 ಸಸ್ಯಗಳನ್ನು ಶಾಸೀಯವಾಗಿ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿವಿಧ ಪ್ರಾಂತ್ಯದ ವಿಶ್ವವಿದ್ಯಾಲಯಗಳ 18 ಅಭ್ಯರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಟ್ರಸ್ಟ್ ಉಪಾಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ಶಶಾಂಕ್, ಕೋಶಾಧ್ಯಕ್ಷ ವಿಶ್ವಜಿತ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net