ಪಟ್ಟಣದ ಜ್ಞಾನ ಭಾರತೀ ವಿದ್ಯಾಕೇಂದ್ರದಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ದ ಚಿಗುರು ಇಂಟರಾಕ್ಟ್ ಕಬ್ಲ್‌ನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯೋಗ ಆಯ್ಕೆ ಮಾಡಲು ಕೌಶಲ್ಯಗಳ ಬಲವರ್ಧನೆಗೆ ಹೆಚ್ಚು ಒತ್ತು ನೀಡಬೇಕು. ತಮ್ಮಲ್ಲಿರವ ಕೌಶಲ್ಯ ಗುರುತಿಸಲು ಸ್ವಯಂ ಮೌಲ್ಯಮಾಪನ ಅಗತ್ಯ. ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ವಿಶಿಷ್ಟ ಸಾಮರ್ಥ್ಯಗಳು, ಮೌಲ್ಯಗಳು ಮತ್ತು ನೈಸರ್ಗಿಕ ಪ್ರತಿಭೆಗಳನ್ನು ಅನ್ವೇಷಿಸುವ ಸೂಕ್ಷ್ಮತೆ ಇರಬೇಕು. ಸ್ಪಷ್ಟವಾದ ಗುರಿ, ನಿಖರವಾದ ಶಿಕ್ಷಣದ ಜತೆಗೆ ಆತ್ಮವಿಶ್ವಾಸದಿಂದ ಮುನ್ನಡೆದಾಗ ಮಾತ್ರ ಜೀವನದಲ್ಲಿ ಉನ್ನತ ಸ್ಥಾನಗಳಿಸಲು ಸಾಧ್ಯ ಎಂದರು.