ಗುಣಮಟ್ಟದ ಹಾಲು ಉತ್ಪಾದಿಸಿ

ತಣಿಗೆಬೈಲು ಮಹಿಳಾ ಸ್ವ ಸಹಾಯ ಸಂಘ ಆಯೋಜಿಸಿದ್ದ ಹಾಲು ಉತ್ಪಾದಕರಿಗೆ ಅರಿವು ಕಾರ್ಯಾಗಾರವನ್ನು ಸಂಘದ ಅಧ್ಯಕ್ಷೆ ಸುಶೀಲಮ್ಮ ಉದ್ಘಾಟಿಸಿದರು. ಡಾ. ಸಿದ್ದರಾಮೇಶ್, ಡಾ. ಮನು, ಸುರೇಶ್‌ಕುಮಾರ್, ಅಕ್ಕನಾಗಮ್ಮ ಇತರರಿದ್ದರು.
ತಣಿಗೆಬೈಲು ಮಹಿಳಾ ಸ್ವ ಸಹಾಯ ಸಂಘ ಆಯೋಜಿಸಿದ್ದ ಹಾಲು ಉತ್ಪಾದಕರಿಗೆ ಅರಿವು ಕಾರ್ಯಾಗಾರವನ್ನು ಸಂಘದ ಅಧ್ಯಕ್ಷೆ ಸುಶೀಲಮ್ಮ ಉದ್ಘಾಟಿಸಿದರು. ಡಾ. ಸಿದ್ದರಾಮೇಶ್, ಡಾ. ಮನು, ಸುರೇಶ್‌ಕುಮಾರ್, ಅಕ್ಕನಾಗಮ್ಮ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಣಿಗೆಬೈಲು ಹಾಲು ಉತ್ಪಾದಕರ ಸಹಕಾರ ಸಂಘ
  • ರೋಗ ನಿರೋಧಕ ಶಕ್ತಿ ಹೆಚ್ಚಳ
ಲಿಂಗದಹಳ್ಳಿ: ಕುಡಿಗೆ ಡೇರಿಯಲ್ಲಿ ಪ್ರತಿ ದಿನ 16650 ಲೀಟರ್ ಹಾಲನ್ನು ಸಂಗ್ರಹಿಸಲಾಗುತ್ತಿದ್ದು, ತಣಿಗೆಬೈಲಿನಲ್ಲಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಚಿಕ್ಕಮಗಳೂರು ಜಿಲ್ಲೆಯ ಕಟ್ಟೆಕಡೆಯ ಭಾಗದಲ್ಲಿರುವ ಗ್ರಾಮೀಣ ಸಂಘ ಎಂದು ಹಾಸನ ಹಾಲು ಒಕ್ಕೂಟದ ಟೀಮ್ ಲೀಡರ್ ಸುರೇಶ್ ತಿಳಿಸಿದರು. 
ತಣಿಗೆಬೈಲು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕ್ಷೀರ ಸಂಜೀವಿನಿ ಹಂತ-5ರ ಯೋಜನೆಯಡಿ ಹೈನುಗಾರರಿಗೆ ಹಮ್ಮಿಕೊಂಡಿದ್ದ ಸಾಕು ಪ್ರಾಣಿಗಳ ಸಾಂಕ್ರಾಮಿಕ ರೋಗಗಳು, ಸಾಕು ಪ್ರಾಣಿಗಳ ಆರೋಗ್ಯ ರಕ್ಷಣೆ, ಲಿಂಗ ಸಮಾನತೆ ಕಾನೂನಿನ ಅರಿವಿನ ಕುರಿತು ತಜ್ಞರಿಂದ ಉಪನ್ಯಾಸ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕೆಎಂಎಫ್‌ನಿಂದ ಸಿಂಗಾಪುರ ಮುಂತಾದ ದೇಶಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಲಾಗುತ್ತಿದೆ. ಹೈನುಗಾರರು ಗುಣಮಟ್ಟದ ಹಾಲನ್ನು ನೀಡುವ ಮೂಲಕ ಹಾಸನ ಹಾಲು ಒಕ್ಕೂಟದೊಂದಿಗೆ ಹಾಲು ಉತ್ಪಾದಕರ ಏಳಿಗೆಗೂ ನೆರವಾಗಬೇಕು ಎಂದು ಹೇಳಿದರು. 
ಕೆಎಂಎಫ್ ಕಡೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕಿ ಅಕ್ಕನಾಗಮ್ಮ ಮಾತನಾಡಿ, ಹೈನುಗಾರರು ತಣಿಗೆಬೈಲು ಹಾಲು ಉತ್ಪಾದಕರ ಸಂಘದಿಂದ ಹೆಚ್ಚಿನ ಪ್ರಮಾಣದ ಹಾಲನ್ನು ಒಕ್ಕೂಟಕ್ಕೆ ನೀಡಬೇಕು ಎಂದರು. 
ತಣಿಗೆಬೈಲು ಸಮುದಾಯ ಆರೋಗ್ಯಾಧಿಕಾರಿ ಡಾ. ಮನು ಮಾತನಾಡಿ, ಹಾಲಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ. ಪ್ರತಿಯೊಬ್ಬರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು. 
ತಣಿಗೆಬೈಲು ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷೆ ಸುಶೀಲಮ್ಮ ಹನುಮಂತಪ್ಪ ಮಾತನಾಡಿ, ತಣಿಗೆಬೈಲು ಸುತ್ತಮುತ್ತಲ ಗ್ರಾಮಗಳಲ್ಲಿ ಹೈನುಗಾರಿಕೆ ನಡೆಯುತ್ತಿದ್ದರೂ, ಹಾಸನ ಹಾಲು ಒಕ್ಕೂಟದ ಡೇರಿ ಇಲ್ಲದೆ ಇದ್ದದರಿಂದ ತೊಂದರೆಯಾಗುತ್ತಿತ್ತು. ಈ ಭಾಗದ ಮುಖಂಡರಾದ ಎನ್.ಎಸ್.ಹನುಮಂತಪ್ಪ, ಕೆ.ಮಂಜು, ಕೆ.ರಾಮದಾಸ್, ಎಚ್.ಚಂದ್ರಶೇಖರ್, ಎಚ್.ರಾಜಪ್ಪ, ಎಸ್.ಪಾಪಣ್ಣ ಇತರರು ಸಹಕಾರಿ ದುರೀಣ ಎಸ್.ಡಿ ಸೋನಾಲ್ ಗೌಡ ಅವರ ಮನವೊಲಿಸಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಕ್ಕೆ ಕಾರಣಕರ್ತರಾದರು ಎಂದರು. 
ವಕೀಲ ಬಿ.ಶೇಖರನಾಯ್ಕ ಅವರು ಲಿಂಗ ಸಮಾನತೆ, ಪಶುವೈದ್ಯ ಸಿದ್ದರಾಮೇಶ್ ಅವರು ಸಾಕು ಪ್ರಾಣಿಗಳ ಸಾಂಕ್ರಾಮಿಕ ರೋಗಗಳ ಕುರಿತು, ಶ್ರೀ ಚೌಡೇಶ್ವರಿ ಪ್ರೌಢಶಾಲಾ ಶಿಕ್ಷಕಿ ಪಾರ್ವತಮ್ಮ ಹೆಣ್ಣು ಮಕ್ಕಳ ಸಮಸ್ಯೆಗಳ ಪರಿಹಾರ ಕುರಿತು ಮಾತನಾಡಿದರು.
ಮಹಿಳಾ ಡೇರಿ ಕಾರ್ಯದರ್ಶಿ ಕಾವ್ಯಾ ಮಂಜುನಾಥ್, ಪದಾಧಿಕಾರಿಗಳು, ಹೈನುಗಾರರು, ವಿವಿಧ ಇಲಾಖೆ ಅಧಿಕಾರಿಗಳು, ತಣಿಗೆಬೈಲು, ಜೈಪುರ, ಕಲ್‌ಶೆಡ್, ತಿಮ್ಮನಬೈಲು, ದೂಪದ ಖಾನ್ ಮುಂತಾದ ಗ್ರಾಮಗಳ ಜನರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net