ಶುದ್ಧ ನೀರು ಬಳಕೆಯಿಂದ ರೋಗಕ್ಕೆ ತಡೆ ರೋಟರಿ, ಹೊರನಾಡು

ಕಳಸ ರೋಟರಿ ಸಂಸ್ಥೆಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ರಾಜಗೋಪಾಲ್ ಜೋಷಿ, ವಿಶಾಲ್ ನೋಟದ, ಕೆ.ಕೆ.ಬಾಲಕೃಷ್ಣ ಭಟ್, ಕುಮಾರಸ್ವಾಮಿ, ಕಿರಣ್ ಶೆಟ್ಟಿ, ಸುಗಮ್, ಗಿರಿಜಾಶಂಕರ ಜೋಷಿ, ಪಣೀಶ್, ಪ್ರಸನ್ನ ಇತರರಿದ್ದರು. ------------------
ಕಳಸ ರೋಟರಿ ಸಂಸ್ಥೆಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು. ರಾಜಗೋಪಾಲ್ ಜೋಷಿ, ವಿಶಾಲ್ ನೋಟದ, ಕೆ.ಕೆ.ಬಾಲಕೃಷ್ಣ ಭಟ್, ಕುಮಾರಸ್ವಾಮಿ, ಕಿರಣ್ ಶೆಟ್ಟಿ, ಸುಗಮ್, ಗಿರಿಜಾಶಂಕರ ಜೋಷಿ, ಪಣೀಶ್, ಪ್ರಸನ್ನ ಇತರರಿದ್ದರು. ------------------
Published on
 ಕಳಸ: ಕಲುಷಿತ ನೀರಿನಿಂದಲೇ ಶೇ.99ರಷ್ಟು ಕಾಯಿಲೆಗಳು ಬರುತ್ತವೆ. ಶುದ್ಧ ನೀರನ್ನು ಒದಗಿಸಿದರೆ ಬಹಳಷ್ಟು ರೋಗಗಳನ್ನು ತಡೆಯಲು ಸಾಧ್ಯ ಎಂದು ರೋಟರಿ ಜಿಲ್ಲಾ ಗವರ್ನರ್ ಪಾಲಾಕ್ಷ ಹೇಳಿದರು.
ರೋಟರಿ ಸಂಸ್ಥೆಯು ಪಟ್ಟಣದ ಹೊರನಾಡು ರಸ್ತೆಯಲ್ಲಿ 1ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಅತ್ಯಾಧುನಿಕ ಕುಡಿಯುವ ನೀರಿನ ಘಟಕವನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕಳಸ ರೋಟರಿ ಸಂಸ್ಥೆ ಅಧ್ಯಕ್ಷ ಮಹೇಂದ್ರ ಮಾತನಾಡಿ, ರೋಟರಿ ಸಭೆಯಲ್ಲಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳಿಗೆ ಕಲುಷಿತ ಕುಡಿಯುವ ನೀರಿನಿಂದ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು. ಇದರ ಲಶ್ರುತಿಯೇ ಈ ನೀರಿನ ಘಟಕ. ಮಾರುಕಟ್ಟೆಯಲ್ಲಿ 1 ಲೀಟರ್ ಬಾಟಲಿ ನೀರಿಗೆ 20 ರೂ. ತೆರಬೇಕಾದ ಇಂದಿನ ದಿನಗಳಲ್ಲಿ ಇಲ್ಲಿ ಬರೋಬ್ಬರಿ 20 ಲೀಟರ್ ಶುದ್ಧ ನೀರನ್ನು ಕೇವಲ 5 ರೂ.ಗೆ ಸಾರ್ವಜನಿಕರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ರಾಜಗೋಪಾಲ್ ಜೋಷಿ, ಕಾರ್ಯದರ್ಶಿ ವಿಶಾಲ್ ನೋಟದ, ಪದಾಧಿಕಾರಿಗಳಾದ ಕೆ.ಕೆ.ಬಾಲಕೃಷ್ಣ ಭಟ್, ಕುಮಾರಸ್ವಾಮಿ, ಕಿರಣ್ ಶೆಟ್ಟಿ, ಸುಗಮ್, ಗಿರಿಜಾಶಂಕರ ಜೋಷಿ, ಪಣೀಶ್, ಪ್ರಸನ್ನ, ಅಭಿನಂದನ್, ರಿತೇಶ್,  ಮುಖಂಡರಾದ ಹಿತ್ಲುಮಕ್ಕಿ ರಾಜೇಂದ್ರ, ಶ್ರೀಕಾಂತ್, ಗೋಪಾಲಗೌಡ, ಕೆ.ಆರ್.ಪ್ರಭಾಕರ್, ಭಾಸ್ಕರ್, ಸುಜಯ ಸದಾನಂದ, ಮಮ್ತಾಜ್ ಬೇಗಂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net