ವರ್ಷಧಾರೆಗಾಗಿ ಪ್ರಾರ್ಥಿಸಿ ಮಳೆಮಲ್ಲಪ್ಪಗೆ ಪೂಜೆ

ಮಳೆಗಾಗಿ ಪ್ರಾರ್ಥಿಸಿ ನಂದಿಬಟ್ಟಲು ಗ್ರಾಮಸ್ಥರು ಜಾರ್ಗಲ್ ಮಳೆ ಮಲ್ಲಪ್ಪ ಮತ್ತು ಶ್ರೀ ಕೋಟೆ ಲಕ್ಷ್ಮೀರಂಗನಾಥಸ್ವಾಮಿಗೆ ಎಡೆ ಪೂಜೆ ಸಲ್ಲಿಸಿದರು.
ಮಳೆಗಾಗಿ ಪ್ರಾರ್ಥಿಸಿ ನಂದಿಬಟ್ಟಲು ಗ್ರಾಮಸ್ಥರು ಜಾರ್ಗಲ್ ಮಳೆ ಮಲ್ಲಪ್ಪ ಮತ್ತು ಶ್ರೀ ಕೋಟೆ ಲಕ್ಷ್ಮೀರಂಗನಾಥಸ್ವಾಮಿಗೆ ಎಡೆ ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹುರುಳಿ, ಬಟಾಣಿ, ಆಲೂಗಡ್ಡೆ
  • ಕೋಟೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ
ಲಿಂಗದಹಳ್ಳಿ: ಮಳೆಗಾಗಿ ಪ್ರಾರ್ಥಿಸಿ ನಂದಿಬಟ್ಟಲು ಸಮೀಪದ ಜಾರ್ಗಲ್ ಮಳೆ ಮಲ್ಲಪ್ಪ ದೇವರಿಗೆ ವಿವಿಧ ರೀತಿಯ ನೂರೊಂದು ಎಡೆ ಸೇವೆ ಸಲ್ಲಿಸಿ ಉತ್ತಮ ಮಳೆ, ಬೆಳೆ ನೀಡುವಂತೆ ಪ್ರಾರ್ಥನೆ ಸಲ್ಲಿಸಲಾಯಿತು. 
ಈ ವರ್ಷದ ಮುಂಗಾರಿನಲ್ಲಿ ಲಿಂಗದಹಳ್ಳಿ ಹೋಬಳಿಯಾದ್ಯಂತ ಈವರೆಗೂ ಶೇ.50ರಷ್ಟು, ಮಳೆ ಬಾರದೇ ರೈತರು ಬಿತ್ತನೆ ಮಾಡಿದ ಹುರುಳಿ, ಬಟಾಣಿ, ಆಲೂಗಡ್ಡೆ, ಅವರೆ, ಜೋಳ, ರಾಗಿ, ಭತ್ತ, ಚಂಡು ಹೂವಿನ ಬೆಳೆ ಒಣಗುತ್ತಿವೆ. ನಂದಿಬಟ್ಟಲು ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆಗಾಗಿ ಈ ಭಾಗದ ಗ್ರಾಮಸ್ಥರು ಮಳೆ ಮಲ್ಲಪ್ಪನ ಬೆಟ್ಟಕ್ಕೆ ನಂದಿಬಟ್ಟಲು ಗ್ರಾಮ ದೇವರಾಗಿರುವ ಕೋಟೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಹೊರಡುವ ದೇವರನ್ನು ಕರೆತಂದು ಮಳೆ ಮಲ್ಲಪ್ಪ ದೇವರ ಸನ್ನಿಧಾನದಲ್ಲಿ ಶ್ರೀಲಕ್ಷ್ಮೀರಂಗನಾಥ ಸ್ವಾಮಿ ದೇವರಿಗೆ ವಿವಿಧ ಭಕ್ಷಗಳಿಂದ ತಯಾರಿಸಿದ ಎಡೆ ಸೇವೆ ಸಲ್ಲಿಸಿದರು. ವಿವಿಧ ಎಡೆ ಪೂಜೆಗಳ ಪೂಜೆ ಸ್ವೀಕರಿಸಿ ಭಕ್ತರ ಬೇಡಿಕೆಗೆ ಸ್ಪಂದಿಸುವ ಮಳೆ ಮಲ್ಲಪ್ಪ ಸ್ವಾಮಿ ಮತ್ತು ಕೋಟೆ ಶ್ರೀಲಕ್ಷ್ಮೀ ರಂಗನಾಥ ಸ್ವಾಮಿ ದೇವರು ಭಕ್ತರು ನೀಡಿದ ಎಡೆ ಸೇವೆಗಳಿಂದ ಸಂತೃಪ್ತರಾಗಿ ಮಳೆ ಸುರಿಸುತ್ತಾರೆ ಎಂಬ ಪ್ರತೀತಿ ಇದೆ. ಈ ದೇವರಿಗೆ ಪೂಜೆ ಸಲ್ಲಿಸಿದಾಗ ಉತ್ತಮ ಮಳೆಯಾಗಿದೆ. 
ನಂದಿಬಟ್ಟಲು ದೇವಾಲಯದ ಪದಾಧಿಕಾರಿಗಳಾದ ಎನ್.ಜೆ.ಭದ್ರೇಗೌಡ , ರಾಮೇಗೌಡ, ಎನ್.ಪಿ.ಕೃಷ್ಣೇಗೌಡ, ನಾರಾಯಣಗೌಡ, ನರಸಿಂಹಮೂರ್ತಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net