ಮರಿಗೆಬೈಲಿನಲ್ಲಿ ಗುಂಡಿ ಬಿದ್ದ ರಸ್ತೆ

ಶೃಂಗೇರಿ-ಆಗುಂಬೆ ಮಾರ್ಗದ ಮರಿಗೆಬೈಲು ರಸ್ತೆಯಲ್ಲಿ ಹೊಂಡ ಬಿದ್ದಿರುವುದು.
ಶೃಂಗೇರಿ-ಆಗುಂಬೆ ಮಾರ್ಗದ ಮರಿಗೆಬೈಲು ರಸ್ತೆಯಲ್ಲಿ ಹೊಂಡ ಬಿದ್ದಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಾಹನಗಳ ಸಂಚಾರ ಅಧಿಕ
  • ಗುಂಡಿಗೆ ಮರದ ಸಣ್ಣ ತುಂಡುಗಳನ್ನು ಇರಿಸಿದ್ದು
ಶೃಂಗೇರಿ: ಪಟ್ಟಣದಿಂದ ಆಗುಂಬೆಗೆ ಸಾಗುವ ಮಾರ್ಗದ ಹೊಸ್ಕೆರಿ ಸಮೀಪ ಮರಿಗೆಬೈಲು ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ವಾಹನ ಸವಾರರಿಗೆ ಅಪಾಯ ಕಾದಿದೆ.
ಪಟ್ಟಣದಿಂದ ಬೇಗಾರು, ಬಿದರಗೋಡು, ಆಗುಂಬೆ ಮಾರ್ಗವಾಗಿ ಉಡುಪಿಗೆ ಹೋಗಲು ಮರಿಗೆಬೈಲು ಮುಖಾಂತರವೇ ಸಂಚರಿಸಬೇಕು. ಈ ಮಾರ್ಗದಲ್ಲಿ ವಾಹನಗಳ ಸಂಚಾರ ಅಧಿಕ. ಇಂಥ ರಸ್ತೆಯಲ್ಲೇ ಗುಂಡಿ ಬಿದ್ದಿದೆ. ವಾಹನ ಸವಾರರು ಗುಂಡಿಗೆ ಬೀಳುವುದನ್ನು ತಪ್ಪಿಸಲು ಯಾರೋ ಗುಂಡಿಗೆ ಮರದ ಸಣ್ಣ ತುಂಡುಗಳನ್ನು ಇರಿಸಿದ್ದು, ತಕ್ಷಣ ಕಾಣಿಸುವಂತೆ ಮಾಡಿದ್ದಾರೆ. ಆದರೆ ಅಧಿಕಾರಿಗಳಿಗೆ ಇನ್ನೂ ಕಾಣಿಸದಿರುವುದು ವಿಪರ್ಯಾಸ. ರಾತ್ರಿ ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ಗುಂಡಿಗೆ ವಾಹನ ಇಳಿದು ಅನಾಹುತ ಉಂಟಾಗುತ್ತದೆ. 
ಭಾರಿ ಮಳೆಯಾದರೆ ಹೊಂಡದೊಳಗೆ ನೀರು ತುಂಬಿದರೆ ರಸ್ತೆ ಇನ್ನಷ್ಟು ಕುಸಿಯುತ್ತದೆ. ಈ ರಸ್ತೆಯಲ್ಲಿ ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದು ಹೆಚ್ಚು. ಹಾಗಾಗಿ ಅಧಿಕಾರಿಗಳು ತುರ್ತಾಗಿ ಹೊಂಡ ಮುಚ್ಚಬೇಕು ಎಂದು ಪ್ರತಿನಿತ್ಯ ಇದೇ ರಸ್ತೆ ಮೂಲಕ ಸಂಚರಿಸುವ ಲಕ್ಷ್ಮೀನಾರಾಯಣ್, ಅರುಣ್, ಸುರೇಶ್, ಲಕ್ಷ್ಮೀ ಮುಂತಾದವರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net