ಶೃಂಗೇರಿ ಕ್ಷೇತ್ರದ ಲಿತಾಂಶ ರದ್ದುಪಡಿಸಲು ಮನವಿ

ಎಂ.ಆರ್.ರವಿಶಂಕರ್
ಎಂ.ಆರ್.ರವಿಶಂಕರ್
Published on
ಎನ್.ಆರ್.ಪುರ: ಶೃಂಗೇರಿ ಕ್ಷೇತ್ರದ ಚುನಾವಣೆ ಈಗಿನ ಫಲಿತಾಂಶ ರದ್ದುಪಡಿಸಿ ಪ್ರಜಾಪ್ರಭುತ್ವ ಎತ್ತಿ ಹಿಡಿಯಬೇಕು ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಎಂ.ಆರ್.ರವಿಶಂಕರ್ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿ, ಶೃಂಗೇರಿ ವಿಧಾನ ಸಭಾ ಚುನಾವಣೆ ಫಲಿತಾಂಶ ದೇಶದ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿದೆ. ಚಿಕ್ಕಮಗಳೂರಿನಲ್ಲಿ ನಡೆದ ಮತ ಎಣಿಕೆಗೂ ಮುನ್ನ ಸ್ಟ್ರಾಂಗ್ ರೂಂ ಬೀಗ ತೆಗೆದಾಗ 20 ಬಾಕ್ಸೃ್ಗಳಲ್ಲಿ 9 ಬಾಕ್ಸೃ್ನ ಸೀಲ್ ಒಡೆದಿತ್ತು. ತಕ್ಷಣ ಆರ್‌ಒ ಗಮನಕ್ಕೆ ತಂದು ಮರು ಮತ ಎಣಿಕೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಚುನಾವಣಾ ಅಧಿಕಾರಿ, ಮತಗಟ್ಟೆ ಅಧಿಕಾರಿಗಳು ನಮ್ಮ ಮನವಿಗೆ ಮಾನ್ಯತೆ ನೀಡದೆ ಎಣಿಕೆ ಮಾಡಿದ್ದಾರೆ. ಮತ ಎಣಿಕೆ ಸಂದರ್ಭದಲ್ಲಿ ರಾಜೇಗೌಡರಿಗೆ ಬಂದ ಅಂಚೆ ಮತಗಳ ಕಟ್ಟು ಹಾಳಾಗಿತ್ತು. ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
2023ರಂತೆ ರಾಜೇಗೌಡರು ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಬೇಕು. ಗುರುವಾರ ಮೂರು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿಗೆ ತೆರಳಿ ಈಗಿನ ಫಲಿತಾಂಶ ತಡೆ ಹಿಡಿಯಬೇಕು ಎಂದು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಮನವಿ ನೀಡಲಾಗುವುದು ಎಂದರು.
ಕೆಡಿಪಿ ಸದಸ್ಯ ಕೆ.ವಿ.ಸಾಜು, ಮುಖಂಡರಾದ ಎಸ್.ಡಿ.ರಾಜೇಂದ್ರ, ಬೆನ್ನಿ, ಅಂಜುಂ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಪಾನಿ ಶ್ರೀಧರ್, ಎಚ್.ಎಂ.ಶಿವಣ್ಣ, ಗಂಗಾಧರ್, ಎಚ್.ಇ.ಮಹೇಶ್, ಸಿಬು, ಸುಬ್ರಹ್ಮಣ್ಯ, ವಸಿಂ, ಕುರಿಯಕೋಸ್, ಗಣೇಶ, ದೇವಂತ, ಮಂಜಣ್ಣ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net