ಬೈಂದೂರಿನ ಅರ್ಶಿತ್ ಅವಿನಾಶ್ ದೋಂಡ್ರೆ ಅಲಿಯಾಸ್ ಮೊಹಮ್ಮದ್ ಅರ್ಶದ್ ಬಂಧಿತ ಆರೋಪಿ. ಮೆಡಿಕಲ್ ಶಾಪ್ ಮಾಲೀಕ ನೂತನ್‌ಕುಮಾರ್ ಅವರು ದೂರು ದಾಖಲಿಸಿದ್ದರು. ಆರೋಪಿಯನ್ನು ಚಿಕ್ಕಮಗಳೂರಿನಲ್ಲಿ ಗುರುವಾರ ಬಂಧಿಸಿದರು. ಆರೋಪಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಜೂ.15ರಂದು ಸಾಗರದ ಲ್ೈಕೇರ್ ಮೆಡಿಕಲ್ ಶಾಪ್‌ನಲ್ಲಿ ಕೂಡಾ ಹಣ ಕಳವು ಮಾಡಿದ್ದೆ ಎಂದು ಮಾಹಿತಿ ನೀಡಿದ್ದಾನೆ. ಶೃಂಗೇರಿ ಪ್ರಭಾರ ಪೊಲೀಸ್ ನಿರೀಕ್ಷಕ ಭರತ್‌ಕುಮಾರ್, ಪಿಎಸ್‌ಐ ಕೆ.ಅಭಿಷೇಕ್, ಪಿಎಸ್‌ಐ ಬಿ.ಆರ್.ನಾಗರಾಜ್, ಸಿಬ್ಬಂದಿ ಸಿ.ಎಚ್.ರಜಿತ್, ಪರಮೇಶ್, ಮದನ್, ಚಾಲಕ ಗೋಪಾಲ್ ರೆಡ್ಡಿ ತಂಡ ಕಾರ್ಯಾಚರಣೆ ನಡೆಸಿತು.